July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಲ್ಲು ಇಲ್ಲದೆ ಅಡಿಕೆ ಸಾಗಾಟ ವಾಹನ ವಶಕ್ಕೆ: ವಾಣಿಜ್ಯ ತೆರಿಗೆ ಇಲಾಖೆಯಿಂದ ದಂಡ

ಬೆಳ್ತಂಗಡಿ : ಸುಲಿದ ಒಣ ಅಡಕೆಯನ್ನು ವಾಣಿಜ್ಯ ತೆರಿಗೆಇಲಾಖೆಯ ಬಿಲ್ಲು ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳಧಮ೯ಸ್ಥಳ ಪೊಲೀಸರ ತಂಡ ತಪಾಸಣೆ ವೇಳೆ ವಾಹನವನ್ನು ಪತ್ತೆ ಹಚ್ಚಿ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದೆ.ಅಡಕೆ ಮತ್ತು ವಾಹನವಕ್ಕೆ ಇಲಾಖೆ ದಂಡ ವಿಧಿಸಿದೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಜು. 12 ರಂದು ಬೆಳಗ್ಗೆ 11 ಗಂಟೆಗೆ ಮುಂಡಾಜೆ ಗ್ರಾಮದ ಪರಶುರಾಮ ರಾಮ ದೇವಸ್ಥಾನದ ಕ್ರಾಸ್ ಬಳಿ ಅಶೋಕ್ ಲೈಲಾಂಡ್ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರೊಳಗೆ ಸುಲಿದ ಒಣ ಅಡಿಕೆ ಇದ್ದು ಇದರ ಚಾಲಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಾಬೀರ್ ಎಂಬವರನ್ನು ವಿಚಾರಿಸಿದಾಗ ಸುಳ್ಯದ ಅಡಕೆ ಅಂಗಡಿಯಿಂದ ಪಡೆದುಕೊಂಡು ಕಡೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಬಿಲ್ಲು / ದಾಖಲಾತಿ ಕೇಳಿದಾಗ ಬಿರೂರು ಅಜ್ಜಂಪುರ ರಸ್ತೆಯಲ್ಲಿರುವ ನಿದಾ ಟ್ರೇಡರ್ಸ್ ಸಂಬಂಧಿಸಿದ ಚೀಟಿಗಳನ್ನು ಸಲ್ಲಿಸಿದ್ದು. ಬೇರೆ ಯಾವುದೇ ಬಿಲ್ಲುಗಳಿಲ್ಲ ಎಂದು ತಿಳಿಸಿದ್ದಾರೆ. ವಾಹನ ಅಡಿಕೆ ಹಾಗೂ ಚಾಲಕನನ್ನು ಧರ್ಮಸ್ಥಳ ಪೊಲೀಸ್ ಠಾಣಾ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಜಾರಿ, ಪಶ್ಚಿಮ ವಲಯ ಮಂಗಳೂರು ವರದಿ ನೀಡಿದ್ದು ಅದರಂತೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ 81,900 ರೂಪಾಯಿ ದಂಡ ವಿಧಿಸಲಾಯಿತು.

Related posts

ನಿವೃತ್ತ ನೌಕರರ ಸಂಘದ ರಜತ ಮಹೋತ್ಸವ ಸ್ಮರಣಸಂಚಿಕೆ “ಪ್ರಬುದ್ಧ” ಡಾ| ಡಿ. ಹೆಗ್ಗಡೆಯವರಿಗೆ ಅರ್ಪಣೆ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ 12 ರಲ್ಲಿ 12 ಸ್ಥಾನ: ಬಿಜೆಪಿ ನಾಯಕ, ಹಾಲಿ ಅಧ್ಯಕ್ಷ ಸುಂದರ ಹೆಗ್ಡೆ ನೇತೃತ್ವದ ತಂಡ ಮತ್ತೊಮ್ಮೆ ಅಧಿಕಾರಕ್ಕೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿನಿ ಕೆ.ಅಮೃತಾ ತಾಲೂಕಿಗೆ ದ್ವಿತೀಯ, ರಾಜ್ಯದಲ್ಲಿ 5ನೇ ರ್‍ಯಾಂಕ್

Suddi Udaya

ಅಳದಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ “ಪೌಷ್ಠಿಕ ಆಹಾರ ಮತ್ತು ಮಾನಸಿಕ ಆರೋಗ್ಯ” ಕಾರ್ಯಕ್ರಮ

Suddi Udaya

ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಭಾರಿ ಗಾತ್ರದ ಗುಡ್ಡ ಕುಸಿತ ವಾಹನ ಸಂಚಾರ ಸoಪೂರ್ಣ ಬಂದ್.

Suddi Udaya
error: Content is protected !!