ಸೂಳಬೆಟ್ಟು : ಸ.ಕಿ.ಪ್ರಾಥಮಿಕ ಶಾಲೆ ಸೂಳಬೆಟ್ಟು ಹಾಗೂ ಇಲ್ಲಿನ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸೂಳಬೆಟ್ಟು ಡೋಂಗ್ರೆ ಕುಟುಂಬಸ್ಥರು ರೋಟರಿ ಕ್ಲಬ್ ಬೆಳ್ತಂಗಡಿ ಮೂಲಕ ಪುಸ್ತಕಗಳನ್ನು ಹಾಗೂ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ಜೂ 20 ರಂದು ವಿತರಿಸಿದರು.
15 ನೇ ವರ್ಷದ ಈ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿಯ ನಿಯೋಜಿತ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಉದ್ಘಾಟಿಸಿ, ಡೋಂಗ್ರೆ ಕುಟುಂಬದವರು ಸಮಾಜದ ಏಳಿಗೆಗಾಗಿ ಸಂಪಾದನೆಯ ಒಂದು ಭಾಗವನ್ನು ವಿನಿಯೋಗಿಸುವ ಮನೋಭಾವವನ್ನು ಇಟ್ಟುಕೊಂಡಿರುವುದು ಮಾದರಿಯಾಗಿದೆ ಎಂದರು.
ರೋಟರಿಯ ನಿಯೋಜಿತ ಕಾರ್ಯದರ್ಶಿ ವಿದ್ಯಾಕುಮಾರ್, ಡಾ| ಸುಷ್ಮಾ ಡೋಂಗ್ರೆ, ಗ್ತಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ ಅತಿಥಿಗಳಾಗಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ಶಾಲಾ ಸಹ ಶಿಕ್ಷಕಿ ಉಮೈಬಾ, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ, ಸಿಬ್ಬಂದಿಗಳಾದ ಲವಿನಾ, ಮಮತಾ, ಚಿತ್ರಾಕ್ಷಿ ಸಹಕರಿಸಿದರು.
ಮಕ್ಕಳಿಗೆ ಪುಸ್ತಕ, ಚೀಲ, ಕೊಡೆ ಇತ್ಯಾದಿಗಳ ಕೊಡುಗೆಗಳನ್ನು ನೀಡಿದ ಡಾ| ಶಶಿಧರ ಡೋಂಗ್ರೆ ಪ್ರಸ್ತಾವಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ವೇಗಸ್ ಸ್ವಾಗತಿಸಿ ವಂದಿಸಿದರು.