September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ವಿಕಾಸ ವಿ.ಸ. ಸಂಘದ ಮಹಾಸಭೆ: ಶೇ.15 ಡಿವಿಡೆಂಡ್ ಘೋಷಣೆ , ರೂ. 262.73 ಕೋಟಿ ವ್ಯವಹಾರ

ಬೆಳ್ತಂಗಡಿ: ಭರವಸೆ ಮತ್ತು ನಂಬಿಕೆಯೊಂದಿಗೆ ವಿಕಾಸ ವಿ.ಸ. ಸಂಘವು ಪ್ರಾರಂಭವಾಗಿ 17 ವರ್ಷ ಪೂರೈಸಿ 18ನೇ ವರ್ಷದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ೨೬೨.೭೩ ಕೋಟಿ ರೂ. ವ್ಯವಹಾರ ನಡೆಸಿ ೩೨.೨೧ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ ಹೇಳಿದರು.

ಗುರುವಾಯನಕೆರೆ ವಿಕಾಸ ಸದನ ಸಭಾಭವನದಲ್ಲಿ ಸೆ.20 ರಂದು ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘವು ೪೯.೬೮ ಕೋ.ರೂ. ಠೇವಣಿ ಹೊಂದಿದ್ದು, ೪೬.೨೩ ಕೋ.ರೂ. ಸಾಲ ವಿತರಿಸಲಾಗಿದೆ. ಕಳೆದ ಸಾಲಿನಿಂದ ಸಾಲ ವಸೂಲಿ ಸಹಿತ ಲಾಭದಲ್ಲಿ ಹೆಚ್ಚಳವಾಗಿದೆ. ಸಂಘವು ಬೆಳ್ತಂಗಡಿ ಪೇಟೆಯಲ್ಲಿ ಕಟ್ಟಡ ಖರೀದಿಗೆ ೧೦ ಕೋ.ರೂ. ವ್ಯಯಿಸಿದ್ದು, ಅದು ಪ್ರಸಕ್ತ ೨೨ ಕೋ.ರೂ. ಮಿಗಿಲಾಗಿ ಪೇಟೆಧಾರಣೆಯಿದೆ. ಸಂಘವು ವಿದೇಶದಲ್ಲಿ ಉದ್ಯೋಗ ನಡೆಸುವ ಮಂದಿಗೆ ಸಾಲದ ರೂಪದಲ್ಲಿ ನೆರವಾಗಿದೆ ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ಗೋಪಿನಾಥ್ ನಾಯಕ್, ಅಂತೋನಿ ಪಾಸ್, ರಾಘವ ಶೆಟ್ಟಿ ಕೆ., ಗ್ರೆಗೋರಿ ಡಿಮೆಲ್ಲೊ, ಪ್ರವೀಣ್ ಕುಮಾರ್ ಎಚ್.ಎಸ್., ಜಗದೀಶ್, ಶೇಖರ್ ನಾಯ್ಕ್, ದಿನೇಶ್ ನಾಯಕ್ ಬಿ., ಪ್ರವೀಣ್ ಚಂದ್ರ ಮೆಹಂದಳೆ, ಮಮತಾ ಎಂ.ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಯೋಗೀಶ್ ಪೈ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಫೆರ್ನಾಂಡಿಸ್ ವಂದಿಸಿದರು. ನಿರ್ದೇಶಕರಾದ ಒಲ್ವಿನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.

Related posts

ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾನಗರ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ನಾವೂರಿನ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya

ಕನ್ಯಾಡಿ: ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಹನುಮಾನ್ ರಥೋತ್ಸವ

Suddi Udaya

ಮರ್ಹೂಮ್ ಅಝ್ರಿನ್ ಸಿದ್ದೀಕ್ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಪ್ರೇರಣಾ ಶಿಬಿರದ ಉದ್ಘಾಟನೆ

Suddi Udaya

ಉಜಿರೆಯಲ್ಲಿ ಸಂವಿಧಾನ ರಕ್ಷಣೆ ಹಾಗೂ ಅಂಬೇಡ್ಕ‌ರ್ ಭವನ ನಿರ್ಮಾಣಕ್ಕಾಗಿ ಸಂಘಟಿತ ಹೋರಾಟಕ್ಕೆ ಕರೆ: ನೂತನ ಸಮಿತಿ ರಚನೆ

Suddi Udaya

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ವಾರ್ಷಿಕ ಮಹಾಸಭೆ

Suddi Udaya
error: Content is protected !!