ಬೆಳ್ತಂಗಡಿ: ಸುಲ್ಕೇರಿಮೊಗ್ರುವಿನ ಯುವಕ ಅಕ್ಷಯ್ ಮಾಳಿಗೆಯವರಿಗೆ ಪೋಲೆಂಡ್ ಯುಗಲೋನಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ

Suddi Udaya

ಬೆಳ್ತಂಗಡಿ: ಕಳೆದ 4 ವರ್ಷದಿಂದ ಪೋಲೆಂಡ್ ನಲ್ಲಿ ನೆಲೆಸಿರುವ ಬೆಳ್ತಂಗಡಿ ತಾಲೂಕು ಸುಲ್ಕೇರಿಮೊಗ್ರು ಗ್ರಾಮದ ಯುವಕ ಅಕ್ಷಯ್ ಮಾಳಿಗೆಯವರು ಸಲ್ಲಿಸಿದ ಮಹಾಪ್ರಬಂಧಕ್ಕೆ ಪೋಲೆಂಡ್ ಕ್ರಾಕೌ ಯುಗಲೋನಿಯನ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಪಾರ್ಟಿಕಲ್ ಫಿಸಿಕ್ಸ್ (ಅಣು ಶಾಸ್ತ್ರ) ವಿಷಯದಲ್ಲಿ, ರೀಡ್ಔಟ್ ಏಂಡ್ ರಿಯಲ್-ಟೈಂ ಡಾಟಾ ಪ್ರೊಸೆಸಿಂಗ್ ಫಾರ್ ಹೈ-ಅಕ್ಸೆಪ್ಟೆನ್ಸ್ ಡೈ-ಎಲೆಕ್ಟ್ರಾನ್ ಸ್ಪೆಕ್ಟ್ರೋಮೀಟರ್ (ಹಾಡೇಸ್) ಅಂಡ್ ಆಂಟಿಪ್ರೋಟಾನ್ ಅನ್ಹಿಲೇಷನ್ ಅಟ್ ಡರ್ಮ್ಸ್ಟ್ಯಾಡ್ಟ್ (ಪಾಂಡಾ)ಎಂಬ ಮಹಾಪ್ರಬಂಧ ಮಂಡಿಸಿ ಅಕ್ಷಯ್ ಮಾಳಿಗೆಯವರು ಈ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇವರು ಬಿಎಸ್ಸಿ ವಿದ್ಯಾಭ್ಯಾಸವನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರೈಸಿ, ಎಂ.ಎಸ್ಸಿ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಕಾಲೇಜು ಬೆಂಗಳೂರಿನಲ್ಲಿ ಪೂರೈಸಿದ್ದಾರೆ. ತದನಂತರ ಉದ್ಯೋಗಕ್ಕಾಗಿ ಪೋಲೆಂಡ್ ದೇಶಕ್ಕೆ ತೆರಳಿದ್ದರು.

ಪ್ರಸ್ತುತ ಇವರು ಅಮೇರಿಕಾದ ಕೊಲಂಬಿಯಾ ಯೂನಿವರ್ಸಿಟಿಗೆ ಡಾಕ್ಟೋರಲ್ ರಿಸರ್ಚ್ ಸೈಂಟಿಸ್ಟ್ ಆಗಿ ಆಯ್ಕೆಯಾಗಿದ್ದು ಜುಲೈ 11 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಸುಲ್ಕೇರಿಮೊಗ್ರು ಗ್ರಾಮದ ಮಾಳಿಗೆ ಮನೆಯ ಪ್ರಗತಿಪರ ಕೃಷಿಕರಾದ ಶ್ರೀಮತಿ ಉಷಾ ಮಾಳಿಗೆ ಮತ್ತು ಹರೀಶ್ ಮಾಳಿಗೆಯವರ ಸುಪುತ್ರ.

Leave a Comment

error: Content is protected !!