27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಗ್ರಾಮಸ್ಥರ ಸಭೆ: ಸಮಿತಿ ರಚನೆ

ಹತ್ಯಡ್ಕ : ಹತ್ಯಡ್ಕ ಗ್ರಾಮದ ದರ್ಭೆತಡ್ಕ ಸುದೆಗಂಡಿ ಕಪಿಲಾನದಿ ಕಿರು ಸೇತುವೆಯು ಶಿಥಿಲಾವಸ್ಥೆಯಲ್ಲಿರುವುದರಿಂದ ಅದರ ದುರಸ್ತಿ ಕೆಲಸ ನಡೆಸುವ ಬಗ್ಗೆ ದರ್ಭೆತಡ್ಕ ಶ್ರೀ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆ ಜೂ.19 ರಂದು ನಡೆಯಿತು.
ಅರಸಿನಮಕ್ಕಿ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಸೌಮ್ಯಾ ತುಳುಪುಳೆ ಹಾಜರಿದ್ದರು.


ಈ ಸಂದರ್ಭದಲ್ಲಿ ಕಪಿಲಾನದಿ ಸೇತುವೆ ದುರಸ್ತಿ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸ್ಮಠ. ಕಾರ್‍ಯದರ್ಶಿಯಾಗಿ ಪ್ರಶಾಂತ್ ಹೆಬ್ಬಾರ್ ನೆಲ್ಲಿತಡ್ಕ ಆಯ್ಕೆಯಾದರು. ಶೀಘ್ರದಲ್ಲಿ ಪಂಚಾಯತ್ ಗ್ರಾಮಸ್ಥರ ಸಹಕಾರದೊಂದಿಗೆ ಸೇತುವೆ ದುರಸ್ತಿ ಕೆಲಸ ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜೋಸೆಫ್ ಪಿರೇರಾ, ವೆಂಕಟೇಶ ಮೆಹೆಂದಳೆ, ಕಾಶಿನಾಥ ಗೋಗಟೆ, ವಾಮನ ತಾಮ್ಹನ್‌ಕರ್, ಧರ್ಮರಾಜ ಗೌಡ, ನರಸಿಂಹ ಪಾಳಂದೆ, ಉದಯಕುಮಾರ್ ಅಭ್ಯಂಕರ್, ವರದಶಂಕರ ದಾಮ್ಲೆ, ರಾಜೇಶ್ ಬೊಳ್ಳೋಡಿ ಉಪಸ್ಥಿತರಿದ್ದರು.

Related posts

ಅ.10-11: ಬಾಲಕರ ಹಾಗೂ ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಬಿಜೆಪಿ ಕೊಕ್ಕಡ 237ನೇ ಬೂತು ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್, ಕಾರ್ಯದರ್ಶಿಯಾಗಿ ಶ್ರೀಧರ್ ಆಯ್ಕೆ

Suddi Udaya

ಬಳಂಜ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ರೆನಿಲ್ಡಾ ಜೋಯ್ಸ್ ಮಥಾಯಸ್ ರವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಗೌರವಾರ್ಪಣೆ

Suddi Udaya

ಬುರುಡೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾದ ಪ್ರದೀಪ್ : ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಎಸ್.ಐ.ಟಿ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆಯ ವಾರ್ಷಿಕ ಮಹಾಸಭೆ

Suddi Udaya

ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು (ಮಾಸ್ ಲಿಮಿಟೆಡ್) ಇವರಿಂದ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಸಹಯೋಗದಲ್ಲಿ ಗುರುವಾಯನಕೆರೆಯಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ

Suddi Udaya
error: Content is protected !!