27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂಬತ್ತನೇ ವರ್ಷದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದರು. ಎಸ್‌ಡಿಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಸಹಾಯಕ ಪ್ರೊ| ಶ್ರೀಮತಿ ವರ್ಷಿಣಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಯೋಗಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮತ್ತು ಸೂರ್ಯ ನಮಸ್ಕಾರ ಕುರಿತ ಬಿತ್ತಿ ಪತ್ರ ಬಿಡುಗಡೆಗೊಳಿಸುವುದರ ಮೂಲಕ ಉದ್ಘಾಟಿಸಲಾಯಿತು.

ವರ್ಷಿಣಿ ಅವರು ತಮ್ಮ ಉದ್ಘಾಟನ ನುಡಿಗಳಲ್ಲಿ ‘ ಯೋಗವು ದೇಹ ಮತ್ತು ಮನಸ್ಸನ್ನು ಸಂಪರ್ಕಿಸುವ ಸಾಧನ. ಯೋಗವು ಪರಸ್ಪರರನ್ನು ಬೆಸೆಯುವಲ್ಲಿ ಸಹಕರಿಸುತ್ತದೆ, ಅದು ಪರಸ್ಪರರಲ್ಲಿನ ಗೊಂದಲಗಳನ್ನು ದೂರ ಮಾಡಿ ವಸುದೈವ ಕುಟುಂಬಕಂ ತತ್ವವನ್ನು ಅನುಷ್ಠಾನಗೊಳ್ಳುವಂತೆ ಮಾಡುತ್ತದೆ’ ಎಂದು ಹೇಳಿದರು.

ಮನಸ್ಸಿನ ಕಲ್ಮಶಗಳನ್ನು ದೂರಗೊಳಿಸಿ ನಡತೆಯನ್ನು ಉತ್ತಮಗೊಳಿಸುವಲ್ಲಿ ಯೋಗವು ತುಂಬಾ ಸಹಕಾರಿ ಎಂದು ಯೋಗದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.

ಹತ್ತು ದಿನಗಳವರೆಗೆ ಯೋಗ ತರಬೇತಿ ನೀಡಿದ ಎಸ್‌ಡಿಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ಅಶ್ವಿತಾ ಮತ್ತು ಕುಮಾರಿ ಪ್ರಾರ್ಥನಾ ಅವರಿಗೆ ಶಾಲಾ ಮುಖ್ಯ ಶಿಕ್ಷಕರು ಸ್ಮರಣಿಕೆ ನೀಡಿ ಗೌರವಿಸಿದರು. ಸಹ ಶಿಕ್ಷಕಿ ಕಾವ್ಯ ಸ್ವಾಗತಿಸಿದರು, ಸಹ ಶಿಕ್ಷಕಿ ಶ್ರೀಮತಿ ಜ್ಯೋತಿ ಧನ್ಯವಾದ ಸಮರ್ಪಿಸಿದರು, ಸಹಶಿಕ್ಷಕಿ ಶ್ರೀಮತಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಅವರ ಮುಂದಾಳುತ್ವದಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಎಲ್ಲಾ ಶಿಕ್ಷಕರು ಸಹಕರಿಸಿದರು. ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು.

Related posts

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

Suddi Udaya

ವೇಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ಫ್ಯಾನ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಚಯರ್ ವಿತರಣೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಹತ್ಯಡ್ಕ ತುಂಬೆತ್ತಡ್ಕ ಕಾಳಬೈರವ ಸ್ವಾಮಿ ಶ್ರೀ ಮಾರಿ ಅಮ್ಮನ ಮಾರಿಗುಡಿಯಲ್ಲಿ ವಾರ್ಷಿಕ ಮಾರಿ ಪೂಜೆ ಉತ್ಸವ

Suddi Udaya

ಬ್ರೂನೇ ದೇಶಕ್ಕೆ ಭಾರತದ ಪ್ರಧಾನಿ‌ ನರೇಂದ್ರ ಮೋದಿಜೀಯವರ ಆಗಮನ: ಬ್ರೂನೇ ದೇಶದಲ್ಲಿ ನೆಲೆಸಿರುವ ಬಳಂಜ ಶಶಿಧರ ಹೆಗ್ಡೆ ಮತ್ತು ಪ್ರಜ್ಞಾ ದಂಪತಿ ಮಕ್ಕಳಾದ ರಿಯಾನ್ಷ್ ಹೆಗ್ಡೆ ಮತ್ತು ತನಿಷ್ಕ್ ಹೆಗ್ಡೆಯವರ ಜೊತೆ ಒಂದು ಸ್ಮರಣೀಯ ಕ್ಷಣ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್ ಯಂತ್ರ ಕೆಟ್ಟು ಹೋದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ವಸಂತ ಬಂಗೇರ

Suddi Udaya
error: Content is protected !!