32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನೆ

ಅಳದಂಗಡಿ: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನಾ ಸಮಾರಂಭವು ಜೂ.21 ರಂದು ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯಿತು.


ನೂತನ ಕಟ್ಟಡದ ಉದ್ಘಾಟನೆಯನ್ನು ಮಂಗಳೂರು ದ.ಕ.ಸ.ಹಾ. ಅಧ್ಯಕ್ಷೆ ಸುಚರಿತ ಶೆಟ್ಟಿ ಉದ್ಘಾಟಿಸಿ, ಶುಭಹಾರೈಸಿದರು. ಸೂಳಬೆಟ್ಟು ಹಾ.ಉ.ಸ.ಸ ಅಧ್ಯಕ್ಷ ನಿರಂಜನ ಜೋಶಿ ಸಭಾಧ್ಯಕ್ಷತೆ ವಹಿಸಿದ್ದರು.

ಕಚೇರಿ ಉದ್ಘಾಟನೆಯನ್ನು ಮಂಗಳೂರು ದ.ಕ.ಸ.ಹಾ. ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಆಡಳಿತ ಕೊಠಡಿಯ ಉದ್ಘಾಟನೆಯನ್ನು ಮಂಗಳೂರು ದ.ಕ.ಸ.ಹಾ. ನಿರ್ದೇಶಕಿ ಸವಿತಾ ಎನ್ ಶೆಟ್ಟಿ, ಪಶು ಆಹಾರ ಗೋದಾಮುವಿನ ಉದ್ಘಾಟನೆಯನ್ನು ಮಂಗಳೂರು ದ.ಕ.ಸ.ಹಾ. ವ್ಯವಸ್ಥಾಪಕ ನಿರ್ದೇಶಕ ಡಿ ಅಶೋಕ್ ನೆರವೇರಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ, ಮಂಗಳೂರು ದ.ಕ.ಸ.ಹಾ. ಉಪವ್ಯವಸ್ಥಾಪಕರು ಸತೀಶ್ ಕೆ. ರಾವ್, ಮಂಗಳೂರು ತಾಂತ್ರಿಕ ವಿಭಾಗ ದ.ಕಸ.ಹಾ ಒಕ್ಕೂಟದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್, ಅಳದಂಗಡಿ ಪ್ರಾ.ಕೃ.ಪ.ಸ.ಸಂ ಅಧ್ಯಕ್ಷ ಶಿವಭಟ್ ಕಟ್ಟೂರು, ಮಂಗಳೂರು ದ.ಕ.ಸ.ಹಾ. ಉಪವ್ಯವಸ್ಥಾಪಕ ಚಂದ್ರಶೇಖರ್ ಭಟ್, ಮಂಗಳೂರು ದ.ಕ.ಸ.ಹಾ. ಒಕ್ಕೂಟ ವಿಸ್ತರಣಾಧಿಕಾರಿ ಶ್ರೀಮತಿ ಸುಚಿತ್ರಾ, ಸಿಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸೂಳಬೆಟ್ಟು ಹಾ.ಉ.ಸ.ಸಂ ಉಪಾಧ್ಯಕ್ಷೆ ವನಿತಾ , ನಿರ್ದೇಶಕರುಗಳಾದ ಮೋಹನ ಹೆಗ್ಡೆ, ಹರೀಶ್ ಪೂಜಾರಿ, ಪ್ರವೀಣಚಂದ್ರ ಮೆಹೆಂದಳೆ, ಪ್ರಮೋದ ಪೂಜಾರಿ, ಜಗನ್ನಾಥ, ಆನಂದ ಪೂಜಾರಿ, ಸುಶೀಲಾ, ರೀಟಾ ಡಿಸೋಜ, ಆನಂದ ಪ್ರಕಾಶ ಕುಟಿನ್ಹಾ, ಹರೀಶ್ ಮಡಿವಾಳ, ಯಶೋಧ, ಹಾಲು ಪರೀಕ್ಷಕಿ ಸುಜಾತ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕು| ಸೌಮ್ಯ ಪ್ರಾರ್ಥಿಸಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಚೈತ್ರಾ ವರದಿ ವಾಚಿಸಿದರು. ಹರೀಶ್ ದೇವಾಡಿಗ ಬಳಂಜ ನಿರೂಪಿಸಿದರು.

Related posts

ನಾಲ್ಕೂರುನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಸೇವಾ ಬಯಲಾಟ

Suddi Udaya

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ಬೆಳ್ತಂಗಡಿ: ಪಂಚಾಯತ್ ಸದಸ್ಯರ ಪೂರ್ವಭಾವಿ ಸಭೆ: ಮಹಾತ್ಮಾ ಗಾಂಧಿಯವರ ‘ಗ್ರಾಮ ಸ್ವರಾಜ್ಯ’ ಕನಸು ಸಾಕಾರಗೊಳಿಸಿದ್ದು ‘ಪಂಚಾಯತ್ ರಾಜ್’ ವ್ಯವಸ್ಥೆ: ರಕ್ಷಿತ್ ಶಿವರಾಂ

Suddi Udaya

ಪದ್ಮುಂಜ: ನೀಲಯ ನಲ್ಕೆ ನಿಧನ

Suddi Udaya

ಕೊಕ್ಕಡ: ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕ ಉದ್ಘಾಟನೆ

Suddi Udaya

ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘದ ವಾಷಿ೯ಕೋತ್ಸವ ಹಾಗೂ ವೇದ ಕುಸುಮ ಶಿಬಿರ ಉದ್ಘಾಟನೆ

Suddi Udaya
error: Content is protected !!