ಬೆಳ್ತಂಗಡಿ: ವೇಣೂರು ಗ್ರಾಮದ ಗುಂಡೂರಿನ ನಿವಾಸಿ ಅನುಷಾ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ವೇಣೂರು ಸರ್ಕಾರಿ ಆಸ್ಪತ್ರೆ ಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಲೇಡಿಗೋಸಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ 108 ಆಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಅನುಷಾರವರಿಗೆ ಮೂತ್ರ ಸೊಂಕಿನ ಸಮಸ್ಯೆ ಇದೆ ಎಂದು ಸಮುದಾಯ ಆರೋಗ್ಯ ಕೇಂದ್ರ ವೇಣೂರು ಇಲ್ಲಿಂದ ಮಂಗಳೂರು ಸರಕಾರಿ ಲೇಡಿಗೋಸಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗ್ಬೇಕು ಎಂದು ಎಮರ್ಜೆನ್ಸಿ ಕರೆ ಬಂದಿದ್ದ ಸಂದರ್ಭ ತಕ್ಷಣ ಕಾರ್ಯ ಪ್ರವೃತ್ತ ರಾದ ಬೆಳ್ತಂಗಡಿ 108 ಆಂಬುಲೆನ್ಸ್ ಸಿಬ್ಬಂದಿಗಳು ವೇಣೂರು ಆಸ್ಪತ್ರೆಯಿಂದ ರೋಗಿಯನ್ನು ಕರೆದುಕೊಂಡು ಹೋಗುವಷ್ಟರಲ್ಲಿ ರೋಗಿಯ ಚಲನ ವಲನ ಗಮನಿಸಿದ ತುರ್ತು ವೈದ್ಯಕೀಯ ತಜ್ಞ ಕೇಶವ. ಕೆ. ಅವರು ಆಂಬುಲೆನ್ಸ್ ಮಂಗಳೂರಿನ ಪಡೀಲ್ ತಲುಪುತಿದ್ದಂತೆ ಆಂಬುಲೆನ್ಸ್ ನಲ್ಲಿಯೇ ಬಹಳ ಕ್ಲಿಷ್ಟಕರವಾದ ಹೆರಿಗೆಯನ್ನು ಮಾಡಿ ಮಗುವನ್ನು ಮತ್ತು ತಾಯಿಯನ್ನು ಮಂಗಳೂರಿನ ಸರಕಾರಿ ಲೇಡಿಗೊಶನ್ ಆಸ್ಪತ್ರೆಗೆ ಬಹಳ ಸುರಕ್ಷಿತವಾಗಿ ದಾಖಲಿಸಿದರು.
ಕೇಶವ ಕೆ ಇವರು ಮಾಡಿದ ಸುರಕ್ಷಿತ 60ನೇ ಆಂಬುಲೆನ್ಸ್ ಹೆರಿಗೆಯಾಗಿರುತ್ತದೆ. ಬೆಳ್ತಂಗಡಿಗೆ ಹೊಸದಾಗಿ ಆಯ್ಕೆಗೊಂಡಿರುವ ಎಮರ್ಜೆನ್ಸಿ (ಪೈಲೆಟ್) ಚಾಲಕ ಮಂಜುನಾಥ್ ಎಚ್. ಕೆ. ಅವರು ಸಹಕರಿಸಿದರು.