September 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ರೆಖ್ಯ ಅಂಗನವಾಡಿಯಲ್ಲಿ ಹಾಳಾದ ಮೊಟ್ಟೆ ವಿತರಣೆ: ಗ್ರಾಮಸ್ಥರ ಅಕ್ರೋಶ

ಬೆಳ್ತಂಗಡಿ: ರೆಖ್ಯ ಗ್ರಾಮದ ಎಂಜಿರ-ಕಟ್ಟೆ ಅಂಗನವಾಡಿ ಕೇಂದ್ರದಿಂದ ಗರ್ಭೀಣಿಯರಿಗೆ ವಿತರಣೆಯಾಗಿದ್ದ ಮೊಟ್ಟೆಗಳು ಹಾಳಾಗಿದ್ದು ಇದರಿಂದ ಗ್ರಾಮಸ್ಥರ ಅಕ್ರೋಶ ವ್ಯಕ್ತಪಡಿಸಿದ ಬಗ್ಗೆ ವರದಿಯಾಗಿದೆ.

ಸರಕಾರದಿಂದ ಗರ್ಭಿಣಿಯರಿಗೆ ಅಂಗನವಾಡಿಯ ಮೂಲಕ ವಿತರಣೆಯಾಗುವ ಮೊಟ್ಟೆಗಳು ಎಲ್ಲಾ ಮನೆಗಳಿಗೂ ತಲುಪಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಅಪೌಷ್ಟಿಕತೆ ನೀಗಿಸುವ ಸರ್ಕಾರದ ಉತ್ತಮ ಕಾರ್ಯದಿಂದ ಬೆಳೆಯುವ ಮಕ್ಕಳು ಪೌಷ್ಟಿಕವಾಗಿ ಬೆಳೆಯುತ್ತಾರೆ ಎನ್ನುವ ಉದ್ದೇಶದಿಂದ ವಿತರಣೆ ಹೊಣೆಯು ಅಂಗನವಾಡಿ ಕಾರ್ಯಕರ್ತೆಯರ ಮೇಲಿತ್ತು.

ಸರ್ಕಾರದಿಂದ ಸಿಗಬೇಕಿದ್ದ ಗುಣಮಟ್ಟದ ಮೊಟ್ಟೆ ಇಲ್ಲಿ ಕಳಪೆಯಾಗಿದ್ದು, ಬೇಯಿಸಿದಾಗ ಮೊಟ್ಟೆಯೊಳಗೆ ಹೆಪ್ಪುಗಟ್ಟಿದ ರಕ್ತ. ಅದಾಗಲೇ ಹೊರಬರಬೇಕಿದ್ದ ಮರಿ ಎಲ್ಲವೂ ಬೆಂದು ಹೋಗಿತ್ತು. ಸದ್ಯ ಈ ವಿಚಾರ ಇಡೀ ಗ್ರಾಮದಲ್ಲಿ ಸಂಚರಿಸಿದ್ದು, ಈ ಬಾರಿ ಮೊಟ್ಟೆ ಪಡೆದುಕೊಂಡಿದ್ದ ಪ್ರತೀ ಮನೆಯಲ್ಲೂ ಗುಣಮಟ್ಟ, ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಬಿತ್ತು.

Related posts

ರಾಕಿಂಗ್ ಸ್ಟಾರ್ ಯಶ್ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಉಚಿತ ಯೋಗ ಶಿಬಿರಕ್ಕೆ ಚಾಲನೆ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಕುರಾಯ-ಬಂದಾರು ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ-ದರ್ಶನ ಬಲಿ, ಬಟ್ಟಲು ಕಾಣಿಕೆ, ಶ್ರೀ ದೇವರಿಗೆ ಕಲಶಾಭಿಷೇಕ, ರುದ್ರಾಭಿಷೇಕ ಮಹಾಪೂಜೆ

Suddi Udaya

ನಿಡ್ಲೆ: ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವ

Suddi Udaya

ಪುಂಜಾಲಕಟ್ಟೆ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ ಜೀವಾವಧಿ ಶಿಕ್ಷೆ

Suddi Udaya
error: Content is protected !!