September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಶಿಪಟ್ಣ ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ

ಕಾಶಿಪಟ್ಣ:ಕಾಶಿಪಟ್ಣ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜು.21 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿ ಬೆಳ್ತಂಗಡಿ ತೋಟಗಾರಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸಭೆಯನ್ನು ಮುನ್ನಡೆಸಿದರು.

ಗ್ರಾಮಸಭೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದರು. ಬೀದಿ ದೀಪ ವಿಸ್ತರಣೆ, ರಸ್ತೆ ಸರಿಪಡಿಸುವಿಕೆ, ಪೊಲೀಸರು ರಾತ್ರಿ ಹೊತ್ತು ಗಸ್ತು ತಿರುಗುವಿಕೆ ಮಾಡಬೇಕು.ಕಾಶಿಪಟ್ಣದಲ್ಲಿ ಪಶು ಆಸ್ಪತ್ರೆ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಮಾತನಾಡಿ ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಸದಾ ಗ್ರಾಮಸ್ಥರು, ಅಧಿಕಾರಿಗಳು ಸಹಕಾರ ನೀಡಿದ್ದು ಸಂತೋಷ ತಂದಿದೆ‌.ನಾನು ಕಳೆದ ಹಲವಾರು ವರ್ಷಗಳಿಂದ ಪಂಚಾಯತ್ ಅಧ್ಯಕ್ಷನಾಗಿ, ಸದಸ್ಯನಾಗಿ ಸುಮಾರು 50 ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದೇನೆ. ಗ್ರಾಮದ ಜನರ ಕಷ್ಟ ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್, ಉಪಾಧ್ಯಕ್ಷೆ ಶುಭವಿ ,ಕಾರ್ಯದರ್ಶಿ ಲೀನಾ ಬೆನಡಿಕ್ಟ ಲೋಬೋ, ಪಂಚಾಯತ್ ಸದಸ್ಯರಾದ ಶಿಲ್ಪಾ, ಸುಶೀಲ, ಅಶೋಕ್ ಕುಮಾರ್, ರವೀಂದ್ರ ಪಿ, ಸವಿತಾ ಹಾಗೂ ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಧರ್ಮಸ್ಥಳ: ನೂತನವಾಗಿ ಪ್ರಾರಂಭಗೊಂಡ ಶ್ರೀ ಶಿವಶಕ್ತಿ ಅಯ್ಯಂಗಾರ್ ಬೇಕರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ ಭೇಟಿ

Suddi Udaya

ಎಸ್.ಡಿ.ಎಂ. ಪಾಲಿಟೆಕ್ನಿಕ್:‌ ಬಸವರಾಜ ಕಟ್ಟೀಮನಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ

Suddi Udaya

ನೇತ್ರಾವತಿ ಪೀಕ್‌ಗೆ ಚಾರಣಿಗರ ಆಗಮನ ಶುರು: ಟ್ರೆಕ್ಕಿಂಗಳ ಸುರಕ್ಷತೆಗಾಗಿ ಅಲ್ಲಲ್ಲಿ ಸೂಚನ ಪಲಕ, ೧೧೫ ಟ್ರೆಕ್ ಗೈಡ್‌ಗಳ ನೇಮಕ

Suddi Udaya

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ಚಿನ್ಮಯ್ ಜಿ.ಕೆ. 597, ನೇಹಾ ಭಟ್ 592 ಅಂಕದೊಂದಿಗೆ ಹೊಸ ದಾಖಲೆ

Suddi Udaya

ಗರ್ಡಾಡಿಯಿಂದ ಶ್ರೀ ಕ್ಷೇತ್ರ ಕಟೀಲುವಿಗೆ ಪಾದಯಾತ್ರೆ ಕೈಗೊಂಡ ಯುವಕರು: ವೃತಾಚಾರಣೆಯೊಂದಿಗೆ ಅಮ್ಮನಡೆಗೆ ನಮ್ಮ ನಡೆ 5ನೇ ವರ್ಷದ ಪಾದಯಾತ್ರೆ

Suddi Udaya

ಉಜಿರೆ ಅನುಗ್ರಹ ಪೂರ್ವ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!