ನಡ: ಸರಕಾರಿ ಪ್ರೌಢಶಾಲೆ ನಡ ಇದರ 2023-24ನೇ ಸಾಲಿನ ಪ್ರಥಮ ಪೋಷಕರ ಸಭೆಯನ್ನು ಜೂ.23 ರಂದು ನಡೆಸಲಾಯಿತು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಸುಧಾಕರ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಹಾಗೂ ವಿಶೇಷವಾಗಿ ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ ಶ್ರೀಮತಿ ಜಯಂತಿ ಸ್ಟ್ರೆಲ್ಲಾ ಸ್ವಾಗತ ಕೋರಿದರು. ಸಭೆಯಲ್ಲಿ ನಿಕಟ ಪೂರ್ವ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಧರ್ಣೇಂದ್ರ ಜೈನ್ ಮಾತಾಡಿ ಪೋಷಕರು ಈ ಸಾಲಿನಲ್ಲಿ ಶಾಲೆಗೆ ಅಡಿಕೆ ತೋಟವನ್ನು ನಿರ್ಮಿಸುವ ಬೇಡಿಕೆಯನ್ನಿತ್ತರು. ಪ್ರಾಸ್ತಾವಿಕವಾಗಿ ಮಾತಾಡಿದ ಶಿಕ್ಷಕ ಶಿವಪುತ್ರ ಸುಣಗಾರ್ ಶಾಲೆಯು ನಡೆದು ಬಂದ ಹಾದಿಯ ಬಗ್ಗೆ ಬೆಳಕು ಚೆಲ್ಲಿದರು.
ಮುಖ್ಯಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ಇವರು ಮಕ್ಕಳ ಪ್ರಗತಿಯ ಬಗ್ಗೆ ಹಾಗೂ ಶಾಲಾಭಿವೃದ್ದಿ ಯೋಜನೆಯ ಬಗ್ಗೆ ಪೋಷಕರಿಗೆ ವಿವರಿಸಿದರು. ಚರ್ಚಾ ಸಮಯದಲ್ಲಿ ಭಾಗವಹಿಸಿದ ಪೋಷಕರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಲಕ್ಷ್ಮಣ ನಾಯ್ಕ, ಆನಂದ ಶೆಟ್ಟಿ, ಶ್ರೀಮತಿ ಚೇತನಾ, ಶ್ರೀಮತಿ ಪ್ರೇಮ ಹೊಕ್ಕಿಲ, ಶ್ರೀಮತಿ ಪ್ರೇಮ ಕೆಳಗಿನ ಸುರ್ಯ ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕ ಮೋಹನ ಬಾಬು ಧನ್ಯವಾದವಿತ್ತರು. ವಿಜ್ಞಾನ ಶಿಕ್ಷಕಿ ಶ್ರೀಮತಿ ಶೋಭಾ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.