27.8 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಸುಧೀರ್ ಎಸ್.ಪಿ ಬೆಳ್ತಂಗಡಿ ಶಾಖೆಗೆ ವರ್ಗಾವಣೆ: ಗ್ರಾಹಕರು ಹಾಗೂ ಸಿಬ್ಬಂದಿಗಳಿಂದ ಬಿಳ್ಕೋಡುಗೆ ಸಮಾರಂಭ

ನಾರಾವಿ: ಕಳೆದ ನಾಲ್ಕು ವರ್ಷಗಳಿಂದ ನಾರಾವಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ ಶಾಖಾ ವ್ಯವಸ್ಥಾಪಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ಇದೀಗ ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ ಶಾಖೆಗೆ ವರ್ಗಾವಣೆಗೊಂಡಿರುವ ಸುಧೀರ್ ಎಸ್ ಪಿ ಅವರಿಗೆ ಬೀಳ್ಕೊಡುಗೆ ಸಮಾರಂಭವು ನಾರಾವಿ ಶಾಖೆಯಲ್ಲಿ ನಡೆಯಿತು.

ಸುಧೀರ್ ಎಸ್.ಪಿ ಅವರು ಮಡಂತ್ಯಾರು ಶಾಖೆಯಲ್ಲಿ ಮ್ಯಾನೇಜರ್ ಆಗಿ ನಂತರ ನಾರಾವಿ ಶಾಖೆಯಲ್ಲಿಯೂ ಮ್ಯಾನೇಜರ್ ಆಗಿ ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕೆಯಿಂದ ಸಲ್ಲಿಸಿ, ನಗುಮೊಗದ ಸೇವೆ ನೀಡಿ ಎಲ್ಲ ಗ್ರಾಹಕರ ಮೆಚ್ಚುಗೆ ಗಳಿಸಿದ್ದರು.ಈ ಸಂದರ್ಭದಲ್ಲಿ ಸುಗಮ ಕಾಂಪ್ಲೆಕ್ಸ್ ಮಾಲಕ ಪ್ರಕಾಶ್ ಜೈನ್,ನಾರಾವಿ ಸಿ.ಎ ಬ್ಯಾಂಕ್ ಅಧ್ಯಕ್ಷ ಸುಧಾಕರ ಭಂಡಾರಿ, ನಾರಾವಿ ಸಿ.ಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್,ಎಸ್.ಸಿ.ಡಿ‌.ಸಿ.ಸಿ ಬ್ಯಾಂಕಿನ ಅಧಿಕಾರಿ ಮಾಲಾ ಎಂ.ಕೆ,ಎಸ್.ಸಿ‌ಡಿ.ಸಿ.ಸಿ ಶಾಖೆಯ ಹಾಗೂ ಸಿಎ ಬ್ಯಾಂಕ್ ನ ಸಿಬ್ಬಂದಿಗಳಿ, ಗ್ರಾಹಕರು ಉಪಸ್ಥಿತರಿದ್ದು ಗೌರವಿಸಿದರು.

Related posts

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರಸನ್ನ ಶಿಕ್ಷಣ ಸಂಸ್ಥೆಗೆ ಭೇಟಿ

Suddi Udaya

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಸಮಾರೋಪ

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ನಡ ಸ. ಪ. ಪೂ ಕಾಲೇಜಿನ ವಿದ್ಯಾರ್ಥಿನಿ ಕು. ಸವಿತಾ ದ್ವಿತೀಯ ಸ್ಥಾನ

Suddi Udaya

ಕನಾ೯ಟಕ ಸಂಗೀತ ನೃತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ಕೃಪಾ ಫಡಕೆ ನೇಮಕ

Suddi Udaya

ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಪ್ರದೀಶ್ ಮರೋಡಿ ಆಯ್ಕೆ

Suddi Udaya

ಜಿಲ್ಲಾ ಚುನಾವಣಾ ಅಧಿಕಾರಿ ಮುಲೈ ಮುಗಿಲನ್ ಎಂಪಿ ರವರಿಂದ ಪ್ರಮಾಣ ಪತ್ರ ಸ್ವೀಕರಿಸಿದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ

Suddi Udaya
error: Content is protected !!