24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ, ಭಯಭೀತರಾದ ಗ್ರಾಮಸ್ಥರು: ಚಿರತೆ ಸೆರೆಹಿಡಿಯಲು ಸ್ಥಳೀಯರ ಸಹಕಾರದಲ್ಲಿ ಇಲಾಖೆ ವತಿಯಿಂದ ಬೋನು ಅಳವಡಿಕೆ

ತೋಟತ್ತಾಡಿ:ಚಾರ್ಮಾಡಿ-ಕನಪಾಡಿ ಅರಣ್ಯ ಪ್ರದೇಶದ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಮೂರ್ಜೆ, ನೆಲ್ಲಿಗುಡ್ಡೆ ಪರಿಸರದಲ್ಲಿ ಕಳೆದ ಒಂದು ವಾರದಿಂದ ಚಿರತೆ ಓಡಾಟ ಕಂಡು ಬಂದಿದೆ.ಇಲ್ಲಿನ ಪರಿಸರದ ಕೆಲವೊಂದು ಸಾಕು ನಾಯಿಗಳು ಕಣ್ಮರೆಯಾಗಿದ್ದು ಚಿರತೆಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಸ್ಥಳೀಯರೊಬ್ಬರು ರಾತ್ರಿ ವೇಳೆ ಮನೆಯತ್ತ ತೆರಳುತ್ತಿದ್ದಾಗ ಮನೆಯಿಂದ ಅನತಿ ದೂರದಲ್ಲಿ ಚಿರತೆಯನ್ನು ಕಂಡಿದ್ದಾರೆ.

ಕಳೆದ ರಾತ್ರಿ ಮೂರ್ಜೆಯ ಮನೆಯೊಂದರ ಮಂದಿ ಸಂಬಂಧಿಕರ ಮನೆಗೆ ತೆರಳಿ ರಾತ್ರಿ 9ರ ವೇಳೆಗೆ ವಾಪಾಸ್ ಆಗುವಾಗ ಅವರ ಸಾಕು ನಾಯಿ ಕಣ್ಮರೆಯಾಗಿದೆ.2022ರ ಕ್ಯಾಮರಾ ಟ್ರಾಪಿಂಗ್ ವೇಳೆಯು ಈ ಪರಿಸರದಲ್ಲಿ ಎರಡು ಬಾರಿ ಚಿರತೆ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಅರಣ್ಯ ಇಲಾಖೆಯ ಡಿ ಆರ್‌ ಎಫ್ ಒ ಭವಾನಿ ಶಂಕರ್, ಗಸ್ತು ಅರಣ್ಯ ಪಾಲಕ ಪಾಂಡುರಂಗ ಕಮತಿ ಪರಿಸರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಹಿಡಿಯಲು ಸ್ಥಳೀಯರ ಸಹಕಾರದಲ್ಲಿ ಇಲಾಖೆ ವತಿಯಿಂದ ಬೋನು ಇರಿಸಲಾಗಿದೆ.

Related posts

ಗುರುವಾಯನಕೆರೆ: ಕೆರೆಯನ್ನು ಅಭಿವೃದ್ಧಿ ಪಡಿಸಲು ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Suddi Udaya

ಪಟ್ರಮೆ: ಶಾಂತಿಕಾಯ ಬಳಿ ಬರೆ ಕುಸಿತ: ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಮಚ್ಚಿನ ಗ್ರಾ.ಪಂ. ಅಧ್ಯಕ್ಷರಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಸೋಮಾವತಿ ಆಯ್ಕೆ

Suddi Udaya

ನ.4: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಾಲೆಗಳಿಗೆ ಪೀಠೋಪಕರಣಗಳ ಸಾಗಾಟ ವಾಹನಗಳ ಚಾಲನೆ

Suddi Udaya

ಉಜಿರೆ: ಗಾಳಿ ಮಳೆಗೆ ರಸ್ತೆಗೆ ಬಿದ್ದ ಮರ ಉಜಿರೆ ಗ್ರಾ.ಪಂ. ನಿಂದ ತೆರವು ಕಾರ್ಯ

Suddi Udaya

ಮಾ.10: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!