ಅಳದಂಗಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಅವರು ಗ್ರಾಮಸಭೆಯನ್ನು ಮುನ್ನಡೆಸಿದರು
ಪಂಚಾಯತ್ ನ ಅಂಗಡಿ ಬಾಡಿಗೆ ಸುಮಾರು 10 ಲಕ್ಷ ಬಾಕಿಯಿದ್ದು ಬಾಡಿಗೆದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಚರ್ಚೆಗಳು ನಡೆದವು.
ಗ್ರಾಮಸಭೆಯಲ್ಲಿ ಪಂಚಾಯತದ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ಪಂಚಾಯತ್ ಉಪಾಧ್ಯಕ್ಷ ಹರೀಶ್ ಆಚಾರ್ಯ,ಸದಸ್ಯರರಾದ ಕೃಷ್ಣಪ್ಪ ಬಿಕ್ಕಿರ, ರವಿ ಪೂಜಾರಿ, ಗೀತಾ,ಪ್ರಶಾಂತ್ ವೇಗಸ್, ಅಬ್ದುಲ್ ಖಾದರ್,ಲಲಿತಾ,ರೂಪಾಶ್ರೀ, ಶಾಲಿನಿ, ಸರಸ್ವತಿ, ಪ್ರವೀಣ ಹಾಗೂ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಪೂವಪ್ಪ ಮಲೆಕುಡಿಯ ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.