April 2, 2025
Uncategorized

ಪುದುವೆಟ್ಟು ಗ್ರಾ.ಪಂ.ನ ಗ್ರಾಮ ಸಭೆ

ಪುದುವೆಟ್ಟು ಗ್ರಾಮ ಪಂಚಾಯತ್ 2023-2024 ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪುದುವೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಯಶವಂತ್‌ ಕುಮಾರ್ ಡಿ. ರವರ ಅಧ್ಯಕ್ಷತೆಯಲ್ಲಿ ಜೂ.26 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಕೊಕ್ಕಡ ಕೃಷಿ ಇಲಾಖೆಯ ನಿರ್ದೇಶಕ ಚಿದಾನಂದ ಹೂಗಾರ ಗ್ರಾಮಸಭೆಯನ್ನು ಮುನ್ನಡೆಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ರೇಣುಕಾ, ಪಂ. ಅಭಿವೃದ್ಧಿ ಅಧಿಕಾರಿ ರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ವಿವಿಧ ಸಮಸ್ಯೆಗಳ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಗುಮಾಸ್ತ ರವಿಶಂಕರ್ ಸ್ವಾಗತಿಸಿದರು.

ಕಾರ್ಯದರ್ಶಿ ಸರೋಜಿನಿ ಕೆ ರವರು ವಾರ್ಡ್ ಸಭೆಗಳಲ್ಲಿ ಬಂದ ಪ್ರಸ್ತಾವನೆ ಹಾಗೂ ಜಮಾ ಖರ್ಚಿನ ಬಗ್ಗೆ ವರದಿ ವಾಚಿಸಿದರು.

Related posts

ಸುಲ್ಕೇರಿ: ಬೀಡಿ ಗುತ್ತಿಗೆದಾರ ಆನಂದ ಪೂಜಾರಿ ನಿಧನ

Suddi Udaya

ಪಟ್ರಮೆ: ಬಲ್ಲಿದಡ್ಡ ನಿವಾಸಿ ಸುರೇಶ್ ಗೌಡ ಆತ್ಮಹತ್ಯೆ ಶಂಕೆ

Suddi Udaya

ಗೇರುಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಮಾರಿಪೂಜೆ

Suddi Udaya

ಮುಂಡಾಜೆ ಗ್ರಾ.ಪಂ. ಹಾಗೂ ನೇತ್ರಾವತಿ ಸಂಜೀವಿನಿ ಒಕ್ಕೂಟದ ವತಿಯಂದ ಮಹಿಳಾ ಗ್ರಾಮ ಸಭೆ ಮತ್ತು ವಿಚಾರ ಸಂಕಿರಣ

Suddi Udaya

ಮಾಲಾಡಿ: ಜ್ವರದಿಂದ ಬಳಲಿ ಯುವಕ ಮೃತ್ಯು

Suddi Udaya

ಕೆದ್ದು ಮಾರ್ನಿಂಗ್ ಕ್ರಿಕೆಟರ್ಸ್ ನಿಂದ ಕೀರ್ತನ್ ರವರ ಚಿಕಿತ್ಸೆಗಾಗಿ ಧನಸಹಾಯ

Suddi Udaya
error: Content is protected !!