ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಆಶ್ರಯದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು , ಶ್ರೀ ಧ.ಮಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಙಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆ ಇವರ ಸಹಯೋಗದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಒಂದೇ ದಿನ ನಡೆದ ಶಿಕ್ಷಣದೊಂದಿಗೆ ಯೋಗ ಎಂಬ 20 ಕಾರ್ಯಾಗಾರ ಆಜ್ಞಾ – ಅರಿವಿನ ಧ್ಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವು ಕೊಯ್ಯುರು ಪ್ರೌಢ ಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಜೆಸಿಐ ಆದ್ಯಕ್ಷರಾದ ಶಂಕರ್ ರಾವ್ ವಹಿಸಿಕೊಂಡಿದ್ದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ಯೋಗ ಚಿಕಿತ್ಸೆ ವಿಭಾಗದ ಡೀನ್ ಆಗಿರುವ ಡಾ. ಶಿವ ಪ್ರಸಾದ್ ಶೆಟ್ಟಿಯವರು ಮಾತಾಡಿ ಮಕ್ಕಳಿಗೆ ಯೋಗದ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಬೆಳವಣಿಗೆಗೆ ಬಹಳಷ್ಟು ಮುಖ್ಯ ಆಗುತ್ತೆ, ಯೋಗ ಮತ್ತು ಶಿಕ್ಷಣಕ್ಕೆ ನಿಕಟ ಸಂಬಂಧವಿದ್ದು ಆ ಮುಖೇನ ನಾವು ಸದೃಢರಾಗೋಕೆ ಇದು ಸಹಾಯಕಾರಿ ಎಂದು ಅಭಿಪ್ರಾಯ ಪಟ್ಟರು.
ಅದೇ ರೀತಿ ಮತ್ತೋರ್ವ ಮುಖ್ಯ ಅತಿಥಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಧಾಕೃಷ್ಣರವರು ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ನಡೆದಾಗ ಮಕ್ಕಳ ಬೆಳವಣಿಗೆಗೆ ಮತ್ತು ಶಾಲೆಗೆ ಸಹಾಯವಾಗುತ್ತದೆ ಎಂದು ಜೇಸಿಐ ಬೆಳ್ತಂಗಡಿ ಮಂಜುಶ್ರೀಗೆ ಕೃತಜ್ಙತೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಹಲವು ಕಡೆ ತರಬೇತಿಗಳನ್ನ ನಡೆಸಿದ ತರಬೇತುದಾರರಾದ ಅನನ್ಯ ಜೈನ್, ದ್ವಿತಿ, ವಿಶ್ಮೀತ, ಶ್ರೀನಿವಾಸ್, ಚಂದನ್, ಅಭೀಜ್ಙಾ, ಯಕ್ಷ ಜೈನ್, ಜಿತ, ಅಕ್ಷತ, ರಚಿತಾ ಇವರುಗಳನ್ನ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಘಟಕದ ನಿಕಟಪೂರ್ವಧ್ಯಕ್ಷರಾದ ಪ್ರಸಾದ್ ಬಿ.ಎಸ್, ಜೆಜೆಸಿ ವಿಭಾಗದ ಅಧ್ಯಕ್ಷ ರಾಮಕೃಷ್ಣ ಶರ್ಮಾ, ಕಾರ್ಯಕ್ರಮ ಸಂಯೋಜಕರಾದ ಪ್ರೀತಮ್ ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಹೇಮಾವತಿ ಅತಿಥಿಗಳನ್ನ ವೇದಿಕೆ ಆಹ್ವಾನಿಸಿ, ರಾಮಕೃಷ್ಣ ಶರ್ಮಾ ಜೇಸಿ ವಾಣಿ ವಾಚಿಸಿ, ಚಂದ್ರಹಾಸ ಬಳಂಜ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಘಟಕದ ಪೂರ್ವಧ್ಯಕ್ಷರಾದ ಚಿದಾನಂದ ಇಡ್ಯಾ, ನಾರಾಯಣ ಶೆಟ್ಟಿ, ಶಾಲಾ ಶಿಕ್ಷಕ ವೃಂದ, ಜೆಜೆಸಿಗಳಾದ ಕವನ್, ಅಶ್ವಿತ್, ಸಮರ್ಥ್, ಸಂಜಯ್, ಶೈಲೇಶ್, ಜೊತೆಗಿದ್ದು ಸಹಕರಿಸಿದರು.