23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವಾಣಿ ವಿದ್ಯಾ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ

ಬೆಳ್ತಂಗಡಿ: ದೂರ ದೃಷ್ಟಿಯ ಯೋಜನೆಗಳಿಂದ ಮಹತ್ತರವಾದ ಪ್ರಗತಿಯನ್ನು ಸಾಧಿಸಿದ ನಾಡಪ್ರಭು ಕೆಂಪೇಗೌಡರು ಯುವ ಜನಾಂಗಕ್ಕೆ ಆದರ್ಶ ರಾಯರಾಗಿದ್ದಾರೆ ಎಂದು ಪಾಣಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಮಹಾಬಲ ಗೌಡ ಹೇಳಿದರು.

ಅವರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಮತ್ತು ವಾಣಿ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಕೆಂಪೇಗೌಡರ 514ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಜನಸಾಮಾನ್ಯರ ಬಗ್ಗೆಯೂ ಕಾಳಜಿಯನ್ನು ಹೊಂದಿದ ಕೆಂಪೇಗೌಡರು ತನ್ನ ನಾಡನ್ನು ಉನ್ನತ ಮಟ್ಟದಲ್ಲಿ ಕಟ್ಟಬೇಕೆಂಬ ಕನಸನ್ನು ಕಂಡಿದ್ದರು ಈ ದೃಷ್ಟಿಯಿಂದ ಅವರು ನಿರ್ಮಿಸಿದ ಕೆರೆಕಟ್ಟೆಗಳು, ಕೋಟೆಗಳು, ನಾನಾ ದ್ವಾರಗಳು, ದೇವಾಲಯಗಳು, ಪೇಟೆಗಳು, ಇಂದಿನ ಜನರಿಗೆ, ಅನುಕೂಲಕರವಾಗಿದೆ ಎಂದು ಹೇಳಿದರು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿಗಳಾದ ಗಣೇಶ್ ಗೌಡ ಸಂಘಟನಾ ಕಾರ್ಯದರ್ಶಿಯಾದ ಜಯನಂದ ಗೌಡ ವಾಣಿ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್ ಕಾಲೇಜಿನ ಉಪ ಪ್ರಾಂಶುಪಾಲರ ವಿಷ್ಣು ಪ್ರಕಾಶ್ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುಹಾಸಿನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ವಾಣಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ಲಕ್ಷ್ಮಿ ನಾರಾಯಣ ಕೆ ವಂದಿಸಿದರು. ಕನ್ನಡ ಉಪನ್ಯಾಸಕರಾದ ಬೆಳಿಯಪ್ಪ ಕೆ ಕಾರ್ಯಕ್ರಮ ನಿರ್ವಹಿಸಿದರು.

Related posts

ವೇಣೂರು ಐಟಿಐ : ಟೊಯೋಟೊ ನೇಮಕಾತಿ ಶಿಬಿರ

Suddi Udaya

ಪಡಂಗಡಿ : ತಿಮ್ಮಪ್ಪ ಜೆ ಪೂಜಾರಿ ನಿಧನ

Suddi Udaya

ಮಂಗಳೂರು ವಿಭಾಗ ಸಹ ಪ್ರಭಾರಿಯಾಗಿ ಜಯಂತ್ ಕೋಟ್ಯಾನ್ ನೇಮಕ

Suddi Udaya

ಕಕ್ಕಿಂಜೆಯ ವೃದ್ಧ ದಂಪತಿಗಳ ಕೊಲೆ ಪ್ರಕರಣ: ಆರೋಪಿ ಗದಗದ ರಾಜುಗೆ ಜೀವಾವಧಿ ಶಿಕ್ಷೆ ಪ್ರಕಟ

Suddi Udaya

ಲೋಕಸಭಾ ಚುನಾವಣೆ ಹಿನ್ನೆಲೆ: ಸಿಯೋನ್ ಆಶ್ರಮ ರಜತಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಮುಂದೂಡಿಕೆ

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಹದಿಹರೆಯದ ಆರೋಗ್ಯ ಮತ್ತು ಶುಚಿತ್ವ ಕಾರ್ಯಕ್ರಮ

Suddi Udaya
error: Content is protected !!