25.3 C
ಪುತ್ತೂರು, ಬೆಳ್ತಂಗಡಿ
April 4, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

ಇಂದಬೆಟ್ಟು : ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಇದರ ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆಯು ಇಂದಬೆಟ್ಟುವಿನ ಅರ್ಧನಾರೀಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಭಾಗವಹಿಸಿ ವಲಯ ಮಟ್ಟದ ಭಜನಾ ಮಂಡಳಿಗಳು ಸಂಘಟಿತರಾದರೆ ಮಾತ್ರ ತಾಲೂಕು ಭಜನಾ ಪರಿಷತ್ತನ್ನು ಬಲಯುತ ಗೊಳಿಸಬಹುದು ಆದುದರಿಂದ ನಮ್ಮ ನಮ್ಮೊಳಗಿನ ಸಣ್ಣ ಪುಟ್ಟ ಭಿನ್ನ ಅಭಿಪ್ರಾಯಗಳನ್ನು ಬದಿಗಿಟ್ಟು ಧಾರ್ಮಿಕತೆಯಲ್ಲಿ ನಾವೆಲ್ಲರೂ ಒಂದಾಗುವುದರೊಂದಿಗೆ ಮುಂದಿನ ಯುವ ಪೀಳಿಗೆಗಳಿಗೆ ಧಾರ್ಮಿಕತೆಯೊಂದಿಗೆ ಗುರುಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಕಲಿಸಬೇಕು ಎನ್ನುತ್ತಾ ಭಜನಾ ಮಂಡಳಿಗಳಲ್ಲಿರುವ ಕುಂದು ಕೊರತೆಗಳ ಬಗ್ಗೆ ಭಜನಾ ಮಂಡಳಿ ಅಧ್ಯಕ್ಷ ಕಾರ್ಯದರ್ಶಿಯಲ್ಲಿ ವಿಮರ್ಶೆ ನಡೆಸಿ ಸೂಕ್ತ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಉಷಾ, ಭಜನಾ ಪರಿಷತ್ತಿನ ವಲಯ ಸಂಯೋಜಕಿಯಾದ ಶ್ರೀಮತಿ ಬೇಬಿ ಉಮೇಶ್, ಸೇವಾ ಪ್ರತಿನಿಧಿಗಳು, ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಲಯದ ಸೇವಾ ಪ್ರತಿನಿಧಿ ಶ್ರೀಮತಿ ಸುನಿತಾ ಸ್ವಾಗತಿಸಿದರು ಹಾಗೂ ಸೇವಾ ಪ್ರತಿನಿಧಿ ಸುಮತಿಯವರು ವಂದಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ಸಂಪನ್ನ

Suddi Udaya

ಉರುವಾಲುಪದವು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಸಂಘ-ಸಂಸ್ಥೆಗಳ ಜಂಟಿ ಸಭೆ

Suddi Udaya

ಬಳಂಜ : ಮುಜ್ಜಿಮೇರು ಮನೆಯ ಒಬ್ಬು ಪೂಜಾರಿ ನಿಧನ

Suddi Udaya

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya

ಎಸ್ ಎ ಫ್ರೆಂಡ್ಸ್ ವತಿಯಿಂದ ಶಬ್ಬೀರ್ ಮಾಲಾಡಿ ಮತ್ತು ಅಕ್ಷಯ್ ಕಲ್ಲೆಗ ಟೈಗರ್ಸ್ ಪುತ್ತೂರು ಇವರ ಸ್ಮಾರನಾರ್ಥಕ ಕಬಡ್ಡಿ ಪಂದ್ಯಾಟ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಸಾಮಾಜಿಕ ಪರಿಶೋಧನೆ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya
error: Content is protected !!