September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಸರಕಾರಿ ಬಸ್ಸಿನಲ್ಲೇ ಹೃದಯಾಘಾತವಾಗಿ ಲಾಯಿಲದ ಇಲೆಕ್ಟ್ರೀಷಿಯನ್ ತಾಜ್ ಬಾವುಂಞಿ ನಿಧನ

ಬೆಳ್ತಂಗಡಿ; ಲಾಯಿಲ ನಿವಾಸಿ, ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದ ತಾಜ್ ಬಾವುಂಞಿ(57) ರವರು ಮಂಗಳೂರಿನಿಂದ ವಾಪಾಸಾಗುತ್ತಿದ್ದ ವೇಳೆ ಸರಕಾರಿ ಬಸ್ಸಿನಲ್ಲೇ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಜೂ.26 ರಂದು ಸಂಜೆ ವೇಳೆ ನಡೆದಿದೆ.

ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಜನಾನುರಾಗಿಯಾಗಿ ಕಳೆದ ನಲ್ವತ್ತು ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಿದ್ದರು. ಅಗತ್ಯ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದ ಅವರು ಸರಕಾರಿ ಬಸ್ಸಿನಲ್ಲಿ ವಾಪಾಸಾಗುತ್ತಿದ್ದರು. ಬಸ್ಸು ಪಡೀಲ್ ತಲುಪುತ್ತಿದ್ದಂತೆ ನಿರ್ವಾಹಕ ಟಿಕೇಟ್ ನೀಡುವುದಕ್ಕಾಗಿ ಕರೆದರೂ ಅವರು ಪ್ರತಿಕ್ರಿಯಿಸಿರಲಿಲ್ಲ.‌ ಸಂದೇಹದಿಂದ ಅಲ್ಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಸ್ಸು ಕೊಂಡೊಯ್ದು ವೈದ್ಯರು ಬಂದು ಪರಿಶೀಲಿಸಿ‌ದಾಗ ಅವರು ಮರಣವನ್ನಪ್ಪಿರುವುದು ಖಚಿತಗೊಂಡಿತು.

ಮೃತರು ಲಾಯಿಲ ಮಸೀದಿಯ ಕಾರ್ಯವ್ಯಾಪ್ತಿಗೆ ಬರುವ ನೂರುಲ್ ಹುದಾ ಎಜುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಟ್ರಸ್ಟ್ ವ್ಯಾಪ್ತಿಗೊಳಪಡುವ ಲಾಯಿಲ ಮಸ್ಜಿದ್‌ನ ವಾಣಿಜ್ಯ ಸಂಕೀರ್ಣದಲ್ಲಿ ಹಾರ್ಡ್‌ವೇರ್ ಮಳಿಗೆ ಹೊಂದಿರುವ ಅಶೋಕ ಶೆಟ್ಟಿ ಅವರ ಪತ್ನಿ ಅದೇ ಬಸ್ಸಿನಲ್ಲಿ ಮಂಗಳೂರಿನಿಂದ ಕೆಲಸ ಮುಗಿಸಿ ವಾಪಾಸಾಗುತ್ತಿದ್ದವರು ಈ ವಿಚಾರ ಅವರ ಪತಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಬಳಿಕ ಮಸೀದಿ ಕಮಿಟಿಯವರಿಗೆ ಅವರು ವಿಚಾರ ಮುಟ್ಟಿಸಿ ಮನೆಯವರು ಹಾಗೂ ಸಮಿತಿಯವರು ತಕ್ಷಣ ಮಂಗಳೂರಿಗೆ ಧಾವಿಸಿ ಅಗತ್ಯ ಕಾನೂನು ಪ್ರಕ್ರೀಯೆ ಮುಗಿಸಿ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಲಾಯಿಲದ ಮನೆಗೆ ತಂದಿದ್ದಾರೆ.

ಮೃತರು ಪತ್ನಿ,‌ ಪದವೀಧರರಾಗಿರುವ ಮೂವರು ಹೆಣ್ಣುಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಇಲಾಖೆ ಅಧಿಕಾರಿಗಳ ಅನುಪಸ್ಥಿತಿ ಶಿಶಿಲ ಗ್ರಾಮ ಕೆ. ಡಿ. ಪಿ ಸಭೆ ಮೂಂದೂಡಿಕೆ

Suddi Udaya

ಬಳಂಜ ಮನಸ್ವಿನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವಾರ್ಷಿಕ ಮಹಾಸಭೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ/ ಕನ್ಯಾಡಿ ಗ್ರಾಮ ಸಮಿತಿ ಮಹಿಳಾ ವೇದಿಕೆ ವತಿಯಿಂದ ಒಂಬತ್ತನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಪಿಲಿಗೂಡು: ಕ್ರೇನ್ ಡಿಕ್ಕಿಯಾಗಿ ಪಾದಚಾರಿ ಮೃತ್ಯು

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು: ನಾಲ್ಕು ಕಾಣಿಕೆ ಡಬ್ಬಿಗಳ ಕಳವು

Suddi Udaya

ಉಜಿರೆ ಎಸ್.ಡಿ.ಎಂ ಪಪೂ ಕಾಲೇಜಿನಲ್ಲಿ 15 ಕ್ಕೂ ಹೆಚ್ಚಿನ ವಿಭಾಗಗಳ ಭಿತ್ತಿ ಪತ್ರಿಕೆ ಅನಾವರಣ

Suddi Udaya
error: Content is protected !!