September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

ನಿಡ್ಲೆ: ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿಯು ಜೂನ್ 26ರಂದು ಉದ್ಘಾಟನೆಗೊಂಡಿತು.

ನಿಡ್ಲೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ನಾಟ್ಯ ತರಬೇತಿ ಗುರುಗಳಾಗಿ ಧರ್ಮಸ್ಥಳ ಮೇಳದಲ್ಲಿ ಅನೇಕ ವರ್ಷಗಳ ಕಾಲ ಕಲಾವಿದನಾಗಿ ಸೇವೆಗೈದ ಈಶ್ವರ ಪ್ರಸಾದ್ ಸಹಕರಿಸಲಿದ್ದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಿಕ್ಷಣದೊಂದಿಗೆ ಕಲೆಯ ಆಸಕ್ತಿಯೂ ವಿದ್ಯಾರ್ಥಿಗಳಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಶಿಕ್ಷಕರಾದ ಶ್ರೀಮತಿ ಶಾಂತ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕರಾದ ಶರತ್ ತುಳುಪುಳೆ ಇವರು ಯಕ್ಷ ಶೈಲಿಯಲ್ಲಿ ಪ್ರಾರ್ಥಿಸಿ, ಶ್ರೀಮತಿ ಶೋಲಿ ಇವರು ಸ್ವಾಗತಿಸಿ, ಶ್ರೀಮತಿ ಸುಚಿತ್ರ ರವರು ವಂದಿಸಿದ ಈ ಕಾರ್ಯಕ್ರಮವನ್ನು ವಿನಾಯಕ ಜೋಶಿ ನಿರ್ವಹಿಸಿದರು.

Related posts

ಉಜಿರೆಯಲ್ಲಿ ಸಹನಶ್ರೀ ಸಹಕಾರಿ ಸೊಸೈಟಿಯ ಕಚೇರಿ ಉದ್ಘಾಟನೆ

Suddi Udaya

ಚಾರ್ಮಾಡಿ : ಎಸ್ಐಟಿ ತಂಡದ ಎಸ್ಪಿ ಮತ್ತು ಇತರ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಇನೋವಾ ಕಾರು ಪಲ್ಟಿ

Suddi Udaya

ಕುಕ್ಕಾವು ಬ್ರಹ್ಮಶ್ರೀ ಮಹಿಳಾ ಸಂಘದಿಂದ ಆರ್ಥಿಕ ನೆರವು

Suddi Udaya

ಶಾಸಕರಿಂದ ವಿವಾದಾತ್ಮಕ ಹೇಳಿಕೆ ಆರೋಪಿಸಿ ಮಹಿಳಾ ಕಾಂಗ್ರೆಸ್ ನಿಂದ ಠಾಣೆಗೆ ದೂರು

Suddi Udaya

ವಯನಾಡು ಭೂಕುಸಿತ ದುರಂತ: ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಸಂತ್ರಸ್ತರಿಗಾಗಿ ಮೊಂಬತ್ತಿ ಪ್ರಾರ್ಥನೆ

Suddi Udaya

ಧರ್ಮಸ್ಥಳ ಸಹಕಾರ ಸಂಘದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Suddi Udaya
error: Content is protected !!