ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಜೋಶ್ ಅಲುಕಾಸ್ ಸಂಸ್ಥೆ ಮಂಗಳೂರು ಇವರಿಂದ ಜೂ.28 ರಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳವನ್ನು ಏರ್ಪಡಿಸಲಾಯಿತು.

ಈ ಮೇಳದಲ್ಲಿ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸಂಸ್ಥೆ ಯ ಹೆಚ್ ಆರ್ ಬಿಜು ಪೌಲೋಸ್ , ರಾಕೇಶ್ ಆಚಾರ್ಯ, ನವೀನ್ ಭಾಗವಹಿಸಿದ್ದರು.
ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿಗಳಾದ ರಶ್ಮಿ, ಕವಿತಾ ಸಹಕರಿಸಿದರು. ಅಧ್ಯಕ್ಷತೆ ಪ್ರಾಂಶುಪಾಲರು ವಹಿಸಿದ್ದರು.