ಉಜಿರೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರಿಯಾತ್ಮಕವಾಗಿ ಯೋಚಿಸಿ ಮುನ್ನಡೆದಾಗ ಯಶಸ್ಸು ಸುಲಭವಾಗಿ ಕೈಗೆತಕುತ್ತದೆ ಎಂದು ಎಸ್. ಡಿ. ಎಮ್ ಸ್ವಾಯತ್ತ ಕಾಲೇಜಿನ ರಿಜಿಸ್ಟ್ರಾರ್ ಹಾಗೂ ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಎಸ್. ಏನ್ ಕಾಕತ್ಕಾರ್ ಹೇಳಿದರು.
ಅವರು ಎಸ್. ಡಿ. ಎಮ್ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಗಿ ಭಾಗವಹಿಸಿ ಮಾತನಾಡುತ್ತಿದ್ದರು. ವಿಜ್ಞಾನ ಎಂದರೇನೇ ಚಟುವಟಿಕೆಗಳ ಆಗರ, ಯಾವತ್ತೂ ವಿಜ್ಞಾನ ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಯೋಚಿಸುತ್ತಾರೋ ಅವರು ನಿಜವಾಗಿಯೂ ವಿಜ್ಞಾನ ವಿದ್ಯಾರ್ಥಿಗಳಗುತ್ತಾರೆ, ಕೇವಲ ವಿಜ್ಞಾನಕ್ಕೆ ಸಂಭದಿಸಿದ ಪುಸ್ತಕ ಓದುವದರಿಂದ ಯಾವುದೇ ಪ್ರಯೋಜನವಾಗದು ಯಾವುದೇ ವಿಷಯವನ್ನಾದ್ರೂ ಸರಿಯಾಗಿ ಓದಿ ಅರ್ಥೈಸಿಕೊಂಡಾಗ ಅದರ ನಿಜ ತಾತ್ಪರ್ಯ ಮನದಟ್ಟಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಪ್ರತಿ ಹಂತದಲ್ಲಿಯೂ ವಿಜ್ಞಾನದ ಅನ್ವಯ ಆಗುತ್ತಿರುತ್ತದೆ ಆದರೆ ಅದನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ ಎಂದು ಹಲವು ದೃಸ್ಟ್ರಾಂತದ ಮೂಲಕ ವಿವರಿಸಿದರು.ವ್ಯಕ್ತಿಗೆ ಯಶಸ್ಸಿಗೆ ೪ ಛಿ ಅಂದರೆ ಕಾನ್ಸೆನ್ಟ್ರೇಷನ್, ಕ್ರಿಯಟಿವ್, ಕಾನ್ಫಿಡೆನ್ಸ್ ಮತ್ತು ಕಮಿಟ್ಮೆಂಟ್ ಬಹಳ ಮುಖ್ಯ, ವಿದ್ಯಾರ್ಥಿಗಳು ಸಕ್ರಿಯವಾಗಿ ಪಠ್ಯ -ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸಿ ನಿಮ್ಮ ಕಲಿಯುವಿಕೆಯನ್ನು ವಿಸ್ತರಿಸಿಕೊಳ್ಳಿ ಎಂದು ಕರೆ ನೀಡಿದರು.
ಭೌತ ವಿಭಾಗದ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ . ಎಚ್. ಸ್ಪೆಕ್ಟ್ರಾ ಅಸೋಸಿಯೇಷನ್ ಉದ್ದೇಶಗಳ ಬಗ್ಗೆ ಮಾತನಾಡಿದರೆ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಮೋದ್ ಕುಮಾರ್ ಮಾತನಾಡಿ ಸಹ ಪಠ್ಯ ಚಟುವಟಿಕೆಗಳು ಸಹ ಕಲಿಕೆಯ ಹಾದಿಯಾಗಿದ್ದು ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ನಮ್ಮಲ್ಲಿ ಅಂತರ್ಗತವಾಗಿ ಹುದುಗಿರುವ ಪ್ರತಿಭೆಗಳನ್ನು ವ್ಯಕ್ತ ಪಡಿಸಲು ಇಂತ ಅಸೋಸಿಯೇಷನ್ ಕಾರ್ಯಾಚಟುವಟಿಕೆಗಳು ಎಲ್ಲರಿಗೂ ಉಪಯುಕ್ತ ವಾಗುವಂತೆ ಕಾರ್ಯ ನಿರ್ವಹಿಸಲಿ ಎಂದರು.
ಕಾರ್ಯಕ್ರಮವನ್ನು ದ್ವಿತೀಯ ವಿಜ್ಞಾನ ವಿದ್ಯಾರ್ಥಿನಿ ಕುಮಾರಿ ಅವನಿ ಹೆಬ್ಬಾರ್ ನಿರೂಪಿಸಿ, ಸಿಂಧೂರ ಪ್ರಾರ್ಥನಾ ಗೀತೆ ಹಾಡಿ,ಸ್ಪೆಕ್ಟ್ರಾ ಅಸೋಸಿಯೇಷನ್ ಕಾರ್ಯದರ್ಶಿ ಕುಮಾರಿ ದಿವ್ಯಶ್ರೀ ಸರ್ವರನ್ನೂ ಸ್ವಾಗತಿಸಿ, ಅಸೋಸಿಯೇಷನ್ ಅಧ್ಯಕ್ಷ ಆದಿ ಎಮ್ ಸರ್ವರನ್ನೂ ವಂದಿಸಿದರು.