24 C
ಪುತ್ತೂರು, ಬೆಳ್ತಂಗಡಿ
April 3, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾಶಿಪಟ್ಣ ಸ.ಪ್ರೌ. ಶಾಲೆಯ ದ್ವಿತೀಯ ದರ್ಜೆ ಸಹಾಯಕಿ ಸವಿತಾರವರಿಗೆ ಬೀಳ್ಕೊಡುಗೆ

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆ ಕಾಶಿಪಟ್ಣ ಇಲ್ಲಿ ಕಳೆದ ಎಂಟು ವರ್ಷಗಳಿಂದ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸವಿತಾ ಕುಮಾರಿ, ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ ) ಅಳದಂಗಡಿ ಇಲ್ಲಿಗೆ ವರ್ಗಾವಣೆಗೊಂಡ ಸಂದರ್ಭದಲ್ಲಿ ಅವರನ್ನು ಶಾಲಾ ವತಿಯಿಂದ ಬೀಳ್ಕೊಡಲಾಯಿತು.

ಕಾಶಿಪಟ್ಟಣ ಗ್ರಾ. ಪಂ. ಉಪಾಧ್ಯಕ್ಷ ಸತೀಶ್. ಕೆ. ಸವಿತಾ ಕುಮಾರಿ ರವರನ್ನು ಸನ್ಮಾನಿಸಿದರು. ಶಾಲಾ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ತಮ್ಮ ಸವಿ ನೆನಪುಗಳನ್ನು ಮೆಲುಕು ಹಾಕಿಕೊಂಡರು. ಸನ್ಮಾನ ಸ್ವೀಕರಿಸಿದ ಸವಿತಾ ಕುಮಾರಿ ತಮಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯನಿ ಶ್ರೀಮತಿ ಪದ್ಮಿನಿ, ಎಸ್‌.ಡಿ.ಎಂ.ಸಿ ಸದಸ್ಯ ಯಶೋಧರ ನಲ್ಲರಬೆಟ್ಟು, ಮತ್ತು ಶಾಲಾ ಅಕ್ಷರ ದಾಸೋಹ ಸಿಬ್ಬಂದಿ ವರ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿ, ಶ್ರೀಮತಿ ಸರೀನ್ ತಾಜ್ ವಂದಿಸಿದರು. ಶ್ರೀಮತಿ ವಿಜಯಾಂಬಿಕಾ ನಿರೂಪಿಸಿದರು.

Related posts

ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಸ್ಪಂದನರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ನಟ ವಿಜಯರಾಘವೇಂದ್ರ ಕುಟುಂಬಸ್ಥರು ಭಾಗಿ

Suddi Udaya

ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಶ್ರಮದಾನ

Suddi Udaya

ಕುಕ್ಕೇಡಿ: ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೀಡಿಯೊ ಹಾಗೂ ಮಾಹಿತಿಪತ್ರ ಅನಾವರಣ

Suddi Udaya

ಗೇರುಕಟ್ಟೆ: ಶ್ರೀ ಪಾರ್ಶ್ವನಾಥ ಫ್ಯೂಯಲ್ ಶುಭಾರಂಭ

Suddi Udaya

ಪ್ರಸನ್ನ ಆಂ.ಮಾ. ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya
error: Content is protected !!