ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಮಂ.ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಜು.1ರಂದು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸ್ಥಳೀಯ ವೈದ್ಯ ಡಿ ಧರಣೇoದ್ರ ಜೈನ್ ಅವರು ಮಕ್ಕಳು ತಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ದಿನನಿತ್ಯ ಬೆಳಿಗ್ಗೆ ಸ್ನಾನ ಮಾಡಿ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮಿತವಾಗಿ ಆಹಾರ ಸೇವನೆ ಮಾಡಿ, ಜಾಸ್ತಿ ನೀರು ಕುಡಿಯಬೇಕು. ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿದೆ ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಮುಖ್ಯ ಗುರುಗಳಾದ ಪಿ ಸುಬ್ರಹ್ಮಣ್ಯ ರಾವ್ ಇವರು ಮನುಷ್ಯರು ಬದುಕಬೇಕಾದರೆ ಮೂಲಭೂತ ಅಗತ್ಯತೆ ಗಳೊಂದಿಗೆ ಆರೋಗ್ಯ ಕೂಡ ತುಂಬಾ ಮುಖ್ಯ.ಆರೋಗ್ಯವೇ ಭಾಗ್ಯ .ನಮ್ಮ ಅರೋಗ್ಯವನ್ನು ಕಾಪಾಡುವ ವೈದ್ಯರು ದೇವರಿಗೆ ಸಮಾನ ಎಂದು ನುಡಿದರು.

ವಿದ್ಯಾರ್ಥಿ ಗಳು ಪ್ರಾರ್ಥಿಸಿ, ಶ್ರೀಮತಿ ಶ್ರೀಜಾ ಸ್ವಾಗತಿಸಿ, ಶ್ರೀಮತಿ ಪೂರ್ಣಿಮಾ ವಂದಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಗಿರಿಜಾ ನಿರೂಪಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ಶಿಕ್ಷಕರು ಸಹಕರಿಸಿದರು.

Related posts

ಮಹಮ್ಮದೀಯ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿನಿ ಅಮೀನಾ ಫಾತಿಮಾರವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya

ಪಡಂಗಡಿ ಮಹಿಳಾ ಗ್ರಾಮಸಭೆ: ಮಹಿಳಾ ಸ್ವಚ್ಛತಾಗಾರರಿಗೆ ಗೌರವ ಸನ್ಮಾನ ಮತ್ತು ಸಮವಸ್ತ್ರ ವಿತರಣೆ

Suddi Udaya

ಮಿತ್ತಬಾಗಿಲು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಿಶೇಷ ತರಗತಿ ಕಾರ್ಯಕ್ರಮದ ಉದ್ಘಾಟನೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಬಿ. ನಿರಂಜನ್ ಬಾವಂತಬೆಟ್ಟುರವರಿಗೆ ನುಡಿನಮನ

Suddi Udaya

ಶ್ರೀರಾಮ ಕ್ರೆಡಿಟ್ ಕೋ ಆಪರೇಟ್ ಸೊಸೈಟಿನಲ್ಲಿ ಗ್ರಾಹಕರ ಹಣ ವಂಚನೆ ಪ್ರಕರಣ: ತನಿಖೆಗಾಗಿ ಬ್ಯಾಂಕಿಗೆ ಎಂಟ್ರಿಯಾದ ಸಿಐಡಿ ತಂಡ

Suddi Udaya

ಶ್ರೀ ಕ್ಷೇತ್ರ ಸೌತಡ್ಕದಲ್ಲಿ ರೂಫಿಂಗ್ ಟ್ರಾಲಿ ಉದ್ಘಾಟನೆ

Suddi Udaya
error: Content is protected !!