April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಹಾಗೂ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ 2 ನೇ ಬಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಹರೀಶ್ ಪೂಂಜರವರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಹರೀಶ್ ಪೂಂಜರವರಿಗೆ ಯುವಶಕ್ತಿ ಫ್ರೆಂಡ್ಸ್ ಕ್ಲಬ್ ನಾಲ್ಕೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಗೌರಾವಾರ್ಪಣೆಯನ್ನು ಶ್ರಮಿಕ ಕಚೇರಿಯಲ್ಲಿ ಜು. 2 ರಂದು ಸಲ್ಲಿಸಲಾಯಿತು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನಕ್ಕೆ ಹಿಂದಿನ ಅವಧಿಯಲ್ಲಿ ಶಾಸಕ ಹರೀಶ್ ಪೂಂಜರವರು ಹೆಚ್ಚಿನ ಅನುದಾನ ನೀಡಿ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವಂತೆ ಶಾಸಕರಲ್ಲಿ ಮನವಿ ಸಲ್ಲಿಸಲಾಯಿತು.ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಸಂಘಟನೆ ಕಳೆದ ಕೆಲ ಸಮಯದಿಂದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದ್ದು ಕ್ಲಬ್ ನ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕರಲ್ಲಿ ಕೇಳಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್,ಯುವಶಕ್ತಿ ಫ್ರೆಂಡ್ಸ್ ತಂಡದ ಪ್ರಮುಖರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ,ಕರುಣಾಕರ ಹೆಗ್ಡೆ ಬೊಕ್ಕಸ,ಜಗದೀಶ್ ಕೋಟ್ಯಾನ್ ತಾರಿಪಡ್ಪು,ಪ್ರವೀಣ್ ಕೋಟ್ಯಾನ್ ದರ್ಖಾಸು, ಸಂಪತ್ ಕೋಟ್ಯಾನ್ ಪುಣ್ಕೆದೊಟ್ಟು, ಶರತ್ ಅಂಚನ್ ಬಾಕ್ಯರಡ್ಡ, ರಂಜಿತ್ ಪೂಜಾರಿ ಮಜಲಡ್ಡ, ಸುದೀಶ್ ತಾರಿಪಡ್ಪು,ಪ್ರಣಾಮ್ ಶೆಟ್ಟಿ ನಾಲ್ಕೂರು ಉಪಸ್ಥಿತರಿದ್ದರು.ಯೋಗೀಶ್ ಆರ್ ಯೈಕುರಿ,ಯತೀಶ್ ಕೋಟ್ಯಾನ್ ಬಳಂಜ, ವಿಜಯ ಪೂಜಾರಿ ಯೈಕುರಿ,ಸಂತೋಷ್ ಕೋಟ್ಯಾನ್ ಹಿಮರಡ್ಡ, ಚಂದ್ರಹಾಸ ಬಳಂಜ,ರಕ್ಷಿತ್ ಪೂಜಾರಿ ಬಗ್ಯೋಟ್ಟು,ಪ್ರಶಾಂತ್ ಮಜಲೋಡಿ, ಸುದೀರ್ ಮಜಲೋಡಿ,ಪ್ರಸಾದ್ ದರ್ಖಾಸು,ಪ್ರಶಾಂತ್ ದರ್ಖಾಸು,ಮಹೇಶ್ ನಾಲ್ಕೂರು,ಪ್ರಥಮ್ ಸಾಲಿಯಾನ್ ಸಹಕರಿಸಿದರು.

Related posts

ಶಿಬಾಜೆಯಲ್ಲಿ ದಲಿತ ಯುವಕನ ಹತ್ಯೆ ಆರೋಪ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಯಿಂದ ಒತ್ತಾಯ

Suddi Udaya

ಜಿಲ್ಲಾಧಿಕಾರಿ ಸಭೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮಲೆಕುಡಿಯ ಸಮುದಾಯದ ಮುಖಂಡರ ಒತ್ತಾಯ

Suddi Udaya

ಮಲವಂತಿಗೆ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆ ಬೆಂಕಿಗಾಹುತಿ: ಅಪಾರ ನಷ್ಟ

Suddi Udaya

ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಶ್ರೀ ಗುರುದೇವ ಪ್ರ.ದ. ಕಾಲೇಜಿನ ವಿದ್ಯಾರ್ಥಿನಿ ಹಸ್ತವಿ ಪ್ರಥಮ ಸ್ಥಾನ

Suddi Udaya

ಬಂದಾರು: ಮುಂಡೂರು ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನ್ನು ನೀಡಬೇಕು: ಪ್ರತಾಪ್ ಸಿಂಹ ನಾಯಕ್

Suddi Udaya
error: Content is protected !!