25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶಾಸಕರ ಕಚೇರಿ “ಶ್ರಮಿಕ” ಕಾರ್ಯಾಲಯ ಉದ್ಘಾಟನೆ: ಶಾಸಕ ಹರೀಶ್ ಪೂಂಜರವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ

ಬೆಳ್ತಂಗಡಿ: ಸರಕಾರದ ವಿವಿಧ ಯೋಜನೆಗಳನ್ನು ತಾಲೂಕಿನ ಜನರಿಗೆ ಮುಟ್ಟಿಸುವುದಲ್ಲದೇ ಜನರ ಬೇಡಿಕೆ ಆಶೋತ್ತರಗಳನ್ನು ಬಗೆಹರಿಸುವ ಶ್ರಮಿಕ ಕಛೇರಿ ಶ್ರಮಜೀವಿಗಳ ಬಾಳಲ್ಲಿ ಬೆಳಕಾಗಿ ಮೂಡಿಬರಲಿ ಎಂದು ಬಿಜೆಪಿ ಪ್ರಭಾರಿ ಹರಿಕೃಷ್ಣ ಬಂಟ್ವಾಳ ಹೇಳಿದರು.

ಅವರು ಜು. 2 ರಂದು ಬೆಳ್ತಂಗಡಿಯ ಶಾಸಕರ ಕಛೇರಿ “ಶ್ರಮಿಕ” ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಕಳೆದ ಅವಧಿಯಲ್ಲಿ ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ಮಾಡಿದ ಅಭೂತಪೂರ್ವ ಅಭಿವೃದ್ಧಿಯಿಂದಾಗಿ ಅತ್ಯಧಿಕ ಮತಗಳಿಂದ ಎರಡನೇ ಬಾರಿಗೆ ಮತ್ತೊಮ್ಮೆ ಹರೀಶ್ ಪೂಂಜ ಅವರನ್ನು ಜನರು ಆಶೀರ್ವದಿಸಿದ್ದಾರೆ.ತಾಲೂಕಿನ ಪ್ರತಿ ಮನೆಗಳ ಮನೆ ಮಗನಾಗಿ ಬೆಳೆದು ಇಡೀ ರಾಜ್ಯದಲ್ಲೇ ಬೆಳ್ತಂಗಡಿ ತಾಲೂಕನ್ನು ಮಾದರಿಯನ್ನಾಗಿಸಿರುವ ಶಾಸಕ ಹರೀಶ್ ಪೂಂಜ ಮತ್ತೊಮ್ಮೆ ತಾಲೂಕಿನ ಶಾಸಕರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ.

ಮುಂದಿನ ದಿನಗಳಲ್ಲೂ ಇನ್ನಷ್ಟೂ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಅವರ ಯೋಜನೆ ಯೋಚನೆಗಳನ್ನು ಈಡೇರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದರು. ಮಾಜಿ ಶಾಸಕ ಪ್ರಭಾಕರ ಬಂಗೇರ ಕಛೇರಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಸುಬ್ರಹ್ಮಣ್ಯ ಅಗರ್ತ, ಪ್ರಮುಖರಾದ ಕೊರಗಪ್ಪ ನಾಯ್ಕ, ಕುಶಾಲಪ್ಪ ಗೌಡ, ಜಯಂತ ಗೌಡ, ಚೆನ್ನಕೇಶವ, ಬಾಲಕೃಷ್ಣ ಶೆಟ್ಟಿ ಸವಣಾಲು, ಪ್ರಶಾಂತ್ ಪಾರೆಂಕಿ, ಗಣೇಶ್ ಗೌಡ ನಾವೂರು, ಸೀತಾರಾಮ್ ಬೆಳಾಲ್, ರಾಜೇಶ್ ನವಶಕ್ತಿ,ಸೋಮನಾಥ ಬಂಗೇರ ವರ್ಪಾಳೆ, ಸದಾನಂದ ಪೂಜಾರಿ ಉಂಗೀಲಬೈಲು, ಶ್ರೀನಿವಾಸ್ ರಾವ್ ಧರ್ಮಸ್ಥಳ, ಶಾಸಕರ ತಂದೆ- ತಾಯಿ, ಪತ್ನಿ, ಮಕ್ಕಳು, ಸೇರಿದಂತೆ ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರುಗಳು ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

ಬಂದಂತಹ ಅತಿಥಿಗಳನ್ನು ಹಾಗೂ ಹಿತೈಷಿಗಳನ್ನು ಶಾಸಕ ಹರೀಶ್ ಪೂಂಜ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು.ಕಾರ್ಯದರ್ಶಿ ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

Related posts

ಬೆಳಾಲಿನಲ್ಲಿ ಅಕ್ರಮ ಮದ್ಯ ದಾಸ್ತಾನು ಘಟಕಕ್ಕೆ ಅಬಕಾರಿ ದಾಳಿ: ಆರೋಪಿ ದಯಾನಂದ ಸಹಿತ ರೂ.45 ಸಾವಿರ ಮೌಲ್ಯದ ಮದ್ಯ ವಶಕ್ಕೆ

Suddi Udaya

ಕುವೆಟ್ಟು ಗ್ರಾ.ಪಂ. ವತಿಯಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya

ಕುಂಟಿನಿ ಮದ್ರಸದಲ್ಲಿ 79 ನೇ ಸ್ವಾತಂತ್ರ್ಯ ಸಂಭ್ರಮ ಆಚರಣೆ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ವಕ್ಫ್ ಜಾಗೃತಿ ಸಭೆ ಕಾರ್ಯಕ್ರಮ

Suddi Udaya

ಬೆಳಾಲು: ಅನoತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya
error: Content is protected !!