ನಡ: ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ( ಚೈಲ್ಡ್ ರೈಟ್ಸ್ ಕ್ಲಬ್) ನ್ನು ಜು.3 ರಂದು ಉದ್ಘಾಟಿಸಲಾಯಿತು.
ಸಂಘದ ಉದ್ಘಾಟನೆಯನ್ನು ಚೈಲ್ಡ್ ರೈಟ್ಟ್ಸ್ ಇದರ ಬೆಳ್ತಂಗಡಿ ತಾಲೂಕು ಸಂಯೋಜಕರಾದ ವಿನೋದ್ ಕುಮಾರ್ ನೆರವೇರಿಸಿ ಸಂಘದ ಕರ್ತವ್ಯಗಳ ಬಗ್ಗೆ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ವಹಿಸಿದ್ದರು.
ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಮಕ್ಕಳ ಹಕ್ಕುಗಳ ಸಂಘದ ಮೂಲಕ ಹೇಗೆ ಪ್ರಶ್ನಿಸಬಹುದು ಎಂಬ ಬಗ್ಗೆ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮಕ್ಕಳ ಹಕ್ಕುಗಳ ಸಂಘದ ಮಾರ್ಗದರ್ಶಿ ಶಿಕ್ಷಕ ಮೋಹನ ಬಾಬು ಡಿ ಇವರು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಶಿವಪುತ್ರ ಸುಣಗಾರ ಉಪಸ್ಥಿರಿದ್ದರು. ಸಭೆಯಲ್ಲಿ ಮಕ್ಕಳ ಹಕ್ಕಗಳ ಕೈಪಿಡಿ ಪುಸ್ತಕವನ್ನು ಸಂಘದ 22 ಸದಸ್ಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನಂತರ ನಡೆದ ಸಂಘದ ಸಭೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಿಸಲಾಯಿತು.