ಮಿತ್ತಬಾಗಿಲು:ಆರೋಗ್ಯ ಅಮೃತ ಯೋಜನೆಯಡಿಯಲ್ಲಿ ಆರೋಗ್ಯ ತಪಾಸಣೆಯು ಮಿತ್ತಬಾಗಿಲು ಗ್ರಾ.ಪಂ ನಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಗೆ ಬರುವ ಗ್ರಾಮಸ್ಥರ ಬಿಪಿ, ಶುಗರ್ ಹಾಗೂ ವಿವಿಧ ರೀತಿಯ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ವಿನಯಚ್ಚಂದ್ರ, ಪಂ.ಅ.ಅಧಿಕಾರಿ ಜಯಕೀರ್ತಿ, ಅಮೃತ ಆರೋಗ್ಯ ಸಂಯೋಜಕಿ ಮಮತಾ ರೈ,ಸಮುದಾಯ ಆರೋಗ್ಯ ಅಧಿಕಾರಿ ಜೀನಾ,ಪ್ರಾಥಮಿಕ ಸುರಕ್ಷತಾ ಅಧಿಕಾರಿ ರೇಣುಕಾ ಹಾಗೂ ಆರೋಗ್ಯ ಸಹಾಯಕಿಯರು, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

previous post
next post