26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಬಂದಾರು ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಇಲ್ಲಿ 2023-2024ನೇ ವಿದ್ಯಾರ್ಥಿ ಸಂಘವನ್ನು ಸರ್ಕಾರಿ ಪ್ರೌಢ ಶಾಲೆ ಕೊಯ್ಯೂರು ಇಲ್ಲಿಯ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ತಚ್ಚಮೆ ಉದ್ಘಾಟಿಸಿ ಮಾತನಾಡುತ್ತಾ ಭಾರತದಂತಹ ವಿಶಾಲ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನ , ಗೌರವ ಇರಬೇಕು.


ಶಾಲೆಗಳಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆಯ ಮೂಲಕ ನಾಯಕನನ್ನು ಆರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಉಂಟಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದೆಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಮುಖ್ಯ ಅಧ್ಯಾಪಕ ಬಾಲಕೃಷ್ಣ ಕೊರಮೇರು ವಹಿಸಿ ಶುಭ ಹಾರೈಸಿದರು.

ಅಧ್ಯಾಪಕರಾದ ವಿಜಯ ಕುಮಾರ್ ಎಂ ಕೊಯ್ಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾನಾಯಕಿ ಆದಿ ಸಹಪಾಠಿಗಳ ಸಹಕಾರದಿಂದ ಒಳ್ಳೆಯ ರೀತಿಯಲ್ಲಿ ಶಾಲೆಯ ಕೆಲಸಗಳನ್ನು ನಿರ್ವಹಿಸುತ್ತೇನೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಾಪಕರುಗಳಾದ ಕೊರಗಪ್ಪ, ವಿವೇಕಾನಂದಗೌಡ , ಮಹೇಶ್ ಎ. ಶ್ರೀಮತಿ ಹೇಮಲತಾ, ದೀಕ್ಷಾ ಮತ್ತು ಉಪನಾಯಕ ದೀಕ್ಷಿತ್ ಉಪಸ್ಥಿತರಿದ್ದರು.

9ನೇ ತರಗತಿ ವಿದ್ಯಾರ್ಥಿನಿಯರಿಂದ ಆರಂಭವಾದ ಕಾರ್ಯಕ್ರಮದ ನಿರ್ವಹಣೆಯನ್ನು 10ನೇ ತರಗತಿ ವಿದ್ಯಾರ್ಥಿನಿಯರಾದ ಅವ್ಯ ಜಯಶ್ರೀ, ಅನನ್ಯ ನಿರ್ವಹಿಸಿ, ಪ್ರತಿಪಕ್ಷದ ನಾಯಕ ಶ್ರವಣ್ ಗೌಡ ಧನ್ಯವಾದವಿತ್ತರು.

Related posts

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಕಚ್ಚಾವಸ್ತು ಪೂರೈಕೆದಾರರಿಂದ ನಾಗಪುರದಲ್ಲಿ ಪ್ರತಿಭಟನೆ – ರೂ.11.50 ಕೋಟಿ ಪಾವತಿಗೆ ಕಂಪೆನಿ ಒಪ್ಪಿಗೆ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರ್ವ ಭಕ್ತರ ಸಭೆ

Suddi Udaya

ಆರಂಬೋಡಿ: ಹೊಕ್ಕಾಡಿಗೋಳಿ ಶಾಲಾ ಶೌಚಾಲಯ ಉದ್ಘಾಟನೆ

Suddi Udaya

ಪ್ರಕೃತಿ ವಿಸ್ಮಯ: ಒಂದೇ ಗೊನೆಯಲ್ಲಿ ಎರಡು ಬಾಳೆ ಹೂ(ಪೂಂಬೆ)

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ

Suddi Udaya

ಧರ್ಮಸ್ಥಳ ಗ್ರಾ.ಪಂ. ಯಿಂದ ಡೆಂಗ್ಯೂ ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಜಾಗೃತಿ ಅಭಿಯಾನ

Suddi Udaya
error: Content is protected !!