ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು: ತಾಲೂಕು ಧ್ವನಿವರ್ಧಕ-ದೀಪಾಲಂಕಾರ ಮಾಲಕರ ಸಂಘದ ಸಭೆ: ಆ. 22ರಂದು ಮಹಾಸಭೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯ

ವೇಣೂರು: ಬೆಳ್ತಂಗಡಿ ತಾಲೂಕು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಸಾಮಾನ್ಯ ಸಭೆಯು ಜು. 4ರಂದು ಇಲ್ಲಿಯ ಮಹಾವೀರ ನಗರದ ಬ್ರಹ್ಮಯಕ್ಷ ಕಾಂಪ್ಲೆಕ್ಸ್‌ನಲ್ಲಿ ಜರಗಿತು.
ಸಂಘದ ಅಧ್ಯಕ್ಷ ಚಂದ್ರಶೇಖರ್ ಅವರು ಅಧ್ಯಕ್ಷತೆ ವಹಿಸಿ, ವಲಯ ಸಭೆಗಳಿಗೆ ಆಗಮಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಸದಸ್ಯರ ಸಹಕಾರ ಕೋರಿದರು. ಸಂಘದ ಸದಸ್ಯತ್ವ ನವೀಕರಣ, ಜಿಲ್ಲಾ ಸಂಘದ ಸದಸ್ಯತ್ವ ಹಾಗೂ ವಲಯ ಸಮಿತಿಗಳಿಂದ ಮಾಸಿಕ ಸಭೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಆ. 22ರಂದು ಅಳದಂಗಡಿಯಲ್ಲಿ ಮಹಾಸಭೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ತಾಲೂಕು ಸಂಘದ ಕಾರ್ಯದರ್ಶಿ ವಸಂತ ಕೆ. ನಾವೂರು, ಗೌರವಾಧ್ಯಕ್ಷ ಸುನಿಲ್, ಉಪಾಧ್ಯಕ್ಷ ಕೆ.ಡಿ. ಜೋಸೆಫ್, ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಸಂಜೀವ ಬಿ.ಎಚ್., ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಭೆಯ ಪೂರ್ಣ ಅತಿಥ್ಯವನ್ನು ವೇಣೂರು ಪದ್ಮಾಂಬ ಸೌಂಡ್ಸ್ & ಶಾಮಿಯಾನದ ಮಾಲಕ ತಾಲೂಕು ಸಂಘದ ಗೌರವಸಲಹೆಗಾರ ಜಿನರಾಜ್ ಜೈನ್ ವಹಿಸಿದ್ದು, ಎಲ್ಲರನ್ನು ಸತ್ಕರಿಸಿದರು. ವಲಯ ಅಧ್ಯಕ್ಷರಾದ ಸುನಿಲ್ ಸ್ವಾಗತಿಸಿ, ಮ್ಯಾಥ್ಯೂ ಕುಟ್ಟಿ ವಂದಿಸಿದರು.

Related posts

ಮಾ.8 ರಿಂದ 11 ರವರೆಗೆ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿದ್ವತ್ ಕಾಲೇಜಿನಿಂದ ಪ್ರತಿಭಾನ್ವೇಷಣೆ ಪರೀಕ್ಷೆ– 2026

Suddi Udaya

ಹೊಸಂಗಡಿ ಹಾಗೂ ಬಡಕೋಡಿ ಗ್ರಾಮದ ಬಂಟ ಸಮುದಾಯದ ಬಂಟ ಗ್ರಾಮ ಸಮಿತಿ ರಚನೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳ ಸಮುದಾಯದ ಅಭಿವೃದ್ಧಿ ವಿಭಾಗ ಆಶ್ರಯದಲ್ಲಿ 418 ಶಾಲೆಗಳಿಗೆ ರೂ.2.50 ಕೋಟಿ ಮೊತ್ತದ 3472 ಜೊತೆ ಪೀಠೋಪಕರಣ ವಿತರಣೆಗೆ ಡಾ.ಹೆಗ್ಗಡೆ ಚಾಲನೆ

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್ ನಲ್ಲಿ ಜೂಫಿಟರ್ 113 ಸಿಸಿ ಸ್ಕೂಟಿ, ಮಾರುಕಟ್ಟೆಗೆ ಬಿಡುಗಡೆ

Suddi Udaya

ಬೆಳ್ತಂಗಡಿ ಜೈನ್ ಮಿಲನ್ ನ ಮಾಸಿಕ ಸಭೆ

Suddi Udaya

ಬಸ್ಸ್ ರಿವರ್ಸ್ ತೆಗೆಯುವ ವೇಳೆ ಮಹಿಳೆಯೋರ್ವರು ಬಸ್ಸಿನಡಿಗೆ ಸಿಲುಕಿ ದಾರುಣ ಸಾವು

Suddi Udaya
error: Content is protected !!