24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ನಬಾರ್ಡ್‌ ಅಧಿಕಾರಿಗಳ ಜೊತೆ ವಿವಿಧ ರಾಜ್ಯಗಳ ಸಹಕಾರಿ ಸಂಘಗಳ ಅಧಿಕಾರಿಗಳ ಭೇಟಿ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಬಾರ್ಡ್‌ ಅಧಿಕಾರಿಗಳ ಜೊತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಚತ್ತೀಸ್ ಘಡ ಸಹಕಾರಿ ಬ್ಯಾಂಕುಗಳ ಪ್ರತಿನಿಧಿಗಳು ಇತ್ತೀಚೆಗೆ ಭೇಟಿ ನೀಡಿದರು.

ಸಂಘದ ವ್ಯವಹಾರ ವಿವಿಧ ಚಟುವಟಿಕೆಗಳನ್ನು, ಗಮನಿಸಿ ಸಂತಸ ವ್ಯಕ್ತಪಡಿಸಿದರು. ಮುಂಡಾಜೆ ಪಾಕ್ಸ ನಬಾರ್ಡನಿಂದ ಎಂಎಸ್ಸಿ ಯೋಜನೆಯಡಿ ನೀಡಿರುವ ಗೋದಾಮು ಕಟ್ಟಡವನ್ನು ಪರಿಶೀಲಿಸಿ, ಇಲ್ಲಿ ಸಂಘ ನಡೆಸುತ್ತಿರುವ ಕೃಷಿ ಯಂತ್ರೋಪಕರಣ ಮಳಿಗೆಯನ್ನು ವೀಕ್ಷಿಸಿದರು.

ಸಂಘದ ಅಧ್ಯಕ್ಷ ಜನಾರ್ದನ ಗೌಡ, ನಿರ್ದೇಶಕ ಶ್ರೀ ರಾಘವ ಮತ್ತು ವೃತ್ತಿಪರ ನಿರ್ದೆಶಕ ಗಜಾನನ ವಝೆ ಸಂಘದ ಕುರಿತು ಮಾಹಿತಿ ನೀಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ಪ್ರಸನ್ನ ಪರಾಂಜಪೆ ವಂದಿಸಿದರು. ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಕಾರ್ಯಕ್ರಮ ನಿರ್ವಹಿಸಿದರು. ನಬಾರ್ಡ್ ಸಂಸ್ಥೆಯ ಶೀಲಾ ಎಂ. ಭಂಡಾರ್ಕರ್ ತಂಡದ ನೇತ್ರತ್ವ ವಹಿಸಿದ್ದರು.

Related posts

ನಡ ಸ. ಪ್ರೌ.ಶಾಲೆಯಲ್ಲಿ ತಾಲ್ಲೂಕು ಮಟ್ಟದ ಯೋಗ ಸ್ಪರ್ಧೆ

Suddi Udaya

ಕನ್ಯಾಡಿ : ಶ್ರೀ ರಾಮ ಕ್ಷೇತ್ರದಲ್ಲಿ ಚಂದ್ರಮಂಡಲ ರಥೋತ್ಸವ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಜ್ವಲ್ ಗೆ ನೀಟ್ ನಲ್ಲಿ 720ರಲ್ಲಿ 710

Suddi Udaya

ಮಾ. 2: ಮುಗೇರಡ್ಕ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಆಹಾರ ಮೇಳ: ಚಪ್ಪರ ಮೂಹೂರ್ತ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ಸಪ್ತಾಹ ಸಂಪನ್ನ

Suddi Udaya

ಐಡಿಎಫ್ ಡಾಡ್ಜ್ ಬಾಲ್ ಫೇಡರೇಷನ್ ಕಪ್ 2024 ಪಂದ್ಯಾಟದಲ್ಲಿ ಅಭಿಶೃತ್ ಇಳಂತಿಲ ಇವರ ನಾಯಕತ್ವದ ಕರ್ನಾಟಕ ತಂಡಕ್ಕೆ ತೃತೀಯ ಪ್ರಶಸ್ತಿ

Suddi Udaya
error: Content is protected !!