29.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

ಬೆಳ್ತಂಗಡಿ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ, ಸುಳ್ಯ ಇದರ ನೂತನ 22 ನೇ ಶಾಖೆಯ ಉದ್ಘಾಟನೆ ಜು.9 ರಂದು ಡಿ’ಸೋಜಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು.

ಅವರು ಜು.5 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಂಘವು 1997ರಲ್ಲಿ ಗೌಡರ ಯುವ ಸೇವಾ ಸಂಘ ಇವರಿಂದ ಪ್ರವರ್ತಿಸಲ್ಪಟ್ಟಿದ್ದು ಪ್ರಾರಂಭದಲ್ಲಿ 435 ಜನರಿಂದ ಪ್ರಾರಂಭವಾದ ಈ ಸಂಘದಲ್ಲಿ ಪ್ರಸ್ತುತ 17,596 ಸದಸ್ಯರಿದ್ದು ಇವರಿಂದ ರೂ.4.40 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ ಭದ್ರತಾ ಸಾಲ, ಗೃಹಸಾಲ, ವಾಣಿಜ್ಯ ಕಟ್ಟಡ ಸಾಲ, ಜಮೀನು ಖರೀದಿ ಸಾಲ, ಜಮೀನು ಅಡವು ಸಾಲ, ವೇತನಾ ನಾಲ, ವ್ಯಾಪಾರ ಸಾಲ, ಸಾಲಗಳನ್ನು ನೀಡುತ್ತಿದ್ದು, ಹಾಗೇಯೇ ಇ-ಸ್ಟಾಂಪಿಂಗ್ ವಿತರಣೆ, ಆರ್‌ಟಿಜಿಎಸ್/ನೆಪ್ಟ್ ಸೌಲಭ್ಯವನ್ನು ನೀಡುತ್ತಿದ್ದೇವೆ. ಸಂಸ್ಥೆಯ ಕಾರ್ಯ ವ್ಯಾಪ್ತಿಯ ರಾಜ್ಯಮಟ್ಟದಾಗಿದ್ದು, ಸಂಘವು ರಾಜ್ಯದ ವಿವಿಧ ಭಾಗಗಳಲ್ಲಿ 21 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ.

ನೂತನ 22 ನೇ ಸೋಮಂತಡ್ಕ ಶಾಖೆಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ರವರು ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮರವರು ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಗಣಕೀಕರಣದ ಉದ್ಘಾಟನೆಯನ್ನು ತ್ರಿವೇಣಿ ರಾವ್ ಕೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮತ್ತೂರು ಉಪವಿಭಾಗ ಅವರು ನೆರವೇರಿಸಲಿದ್ದು, ಪ್ರಥಮ ಠೇವಣಿಪತ್ರವನ್ನು ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಮಾಜಿ ಅಧ್ಯಕ್ಷ ಪಿ.ತಿಮ್ಮಪ್ಪ ಗೌಡ ಬೆಳಾಲು ವಿತರಿಸಲಿದ್ದು, ಪ್ರಥಮ ಪಾಲುಪತ್ರ ವಿತರಣೆಯನ್ನು ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಜಿನಿ ಆರ್ ನೆರವೇರಿಸಲಿದ್ದಾರೆ. ಪ್ರಥಮ ಉಳಿತಾಯ ಖಾತೆ ಪಾಕವನ್ನು ಲೋಕೇಶ್ವರಿ ದಿನಚಂದ್ರ ಮಹಾಪೋಷಕರು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಇವರು ವಿತರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಿ. ಎಂ. ಗೌಡ ನಿವೃತ್ತ ಮುಖ್ಯ ಅಭಿಯಂತರರು, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಡಾ.ಚಂದ್ರಕಾಂತ್, ಡಿ’ಸೋಜಾ ಕಾಂಪ್ಲೆಕ್ಸ್‌ನ ಮಾಲಕ ಹೆನ್ರಿ ಡಿ’ಸೋಜಾ ಭಾಗವಹಿಸಲಿದ್ದಾರೆ.
ಈ ಸಹಕಾರಿ ವರ್ಷ ಸಂಘಕ್ಕೆ 25 ವರ್ಷಗಳಾಗುತ್ತಿದ್ದು ಇದರ ಅಂಗವಾಗಿ 25 ಶಾಖೆಗಳನ್ನು ಆರಂಭಿಸಲು ನಿರ್ಧರಿಸಿರುತ್ತೇವೆ.ಬೆಳ್ಳಿ ಹಬ್ಬದ ಅಂಗವಾಗಿ ಸಂಘದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಯೋಜನೆಯನ್ನು ರೂಪಿಸಿರುತ್ತೇವೆ. ಸಂಘವು ಪ್ರಾರಂಭವಾದಾಗಿನಿಂದಲೂ ಲಾಭದಲ್ಲಿ ನಡೆಯುತ್ತಿದ್ದು, ಈ ಸಹಕಾರಿ ವರ್ಷದಲ್ಲಿಯೂ ಲಾಭದಲ್ಲಿ ಸಂಘ ಮುನ್ನಡೆಯುತ್ತಿದ್ದು ಸದಸ್ಯರುಗಳಿಗೆ ಡಿವಿಡೆಂಡ್ ವಿತರಿಸಲಿದ್ದೇವೆ. ಪ್ರಸ್ತುತ ಸಂಘದಲ್ಲಿ ರೂ 163.22 ಕೋಟಿ ಠೇವಣಿ ಇದ್ದು ರೂ.151.53 ಕೋಟಿ ಸಾಲಗಳನ್ನು ಸದಸ್ಯರುಗಳಿಗೆ ವಿವರಿಸಿ, ರೂ. 181.68 ಕೋಟಿ ದುಡಿಯುವ ಬಂಡವಾಳವಿದ್ದು ಒಟ್ಟು ರೂ.850 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸುತ್ತಿದ್ದೇವೆ. ನಮ್ಮ ಸಂಘವು ಜನರಲ್ಲಿ ಉಳಿತ ಮನೋಭಾವನೆಯನ್ನು ಬೆಳೆಸುವುದು, ಕೃಷಿಕರು, ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸುವುದು, ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವಾಗುವ ಉದ್ದೇಶವನ್ನು ಹೊಂದಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕ ಪಿ. ಎಸ್. ಗಂಗಾಧರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ.ವಿಶ್ವನಾಥ ಉಪಸ್ಥಿತರಿದ್ದರು.

Related posts

ಕಲ್ಮಂಜ ಗ್ರಾಮಸಭೆ: ಪೈಪುಗಳು ಒಡೆದು 4 ದಿವಸದಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ

Suddi Udaya

ಅಯೋಧ್ಯೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ವಿಶೇಷ ಪೂಜೆ

Suddi Udaya

ಸುಲ್ಕೇರಿ ಚೈತನ್ಯ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಗ್ರಾ.ಪಂ. ಆಶ್ರಯದಲ್ಲಿ ಆಟಿಡೊಂಜಿ ದಿನ

Suddi Udaya

ಜೂ.23 : ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವ ಸಂಭ್ರಮ: 1 ಕೋಟಿ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಅಂತಿಮ ಸಿದ್ಧತೆ

Suddi Udaya

ಧರ್ಮಸ್ಥಳ ನಾರ್ಯ ದಲ್ಲಿ ಸೇತುವೆ ಕುಸಿತ

Suddi Udaya
error: Content is protected !!