30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮರೋಡಿ: ಕೂಕ್ರಬೆಟ್ಟು ಶಾಲೆಗೆ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಭೇಟಿ

ಮರೋಡಿ : ಕೂಕ್ರಬೆಟ್ಟು,ಮರೋಡಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ,”ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ   ರಾಜ್ಯಾಧ್ಯಕ್ಷ  ಪ್ರಕಾಶ್ ಅಂಚನ್ ಭೇಟಿ ನೀಡಿ, ನೂತನ ಕಟ್ಟಡ ಹಾಗು  ಕೊಠಡಿಗಳ ನಿರ್ಮಾಣದ ಕಾಮಗಾರಿ ವೀಕ್ಷಿಸಿ  ಮೆಚ್ಚುಗೆ ವ್ಯಕ್ತಪಡಿಸಿದರು.
 ನಾಲ್ಕು ವರ್ಷದ ಹಿಂದೆ 16 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಮುಚ್ಚುವ ಸ್ಥಿತಿಗೆ ತಲುಪಿದ ಶಾಲೆಯನ್ನು ದತ್ತು ಪಡೆದ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿಯ ಸಹಕಾರದಿಂದ ಇದೀಗ ಶಾಲೆಯಲ್ಲಿ 180 ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತೆ ಆಗಿದೆ.


ಸರಕಾರಿ ಶಾಲೆ  ಉಳಿಸಿ ಬೆಳೆಸಿ ಮತ್ತು ಶಾಲಾಭಿವೃದ್ದಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಊರಿನ ಶಿಕ್ಷಣ ಪ್ರೇಮಿಗಳಿಂದ ಶಾಲೆಯ ಸಾಧನೆಯನ್ನು ಕಂಡು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಶಾಲೆಯ ಬೆಳವಣಿಗೆಗೆ ಪೂರಕವಾಗಿ, ಬಂಟ್ವಾಳ ದಡ್ಡಲಕಾಡು ಸರಕಾರಿ ಶಾಲೆಯನ್ನು ದತ್ತು ಪಡೆದು  ರಾಜ್ಯ ಮಟ್ಟದಲ್ಲಿ ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಿದ  ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಶಾಲೆಗೆ ನೂತನ  ಬಸ್ ನೀಡಲಾಯಿತು.ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ  300 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಗುರಿ ಹೊಂದಿದ್ದು, ರಾಜ್ಯದಲ್ಲಿ ಎರಡನೇ ಮಾದರಿ ಸರಕಾರಿ  ಶಾಲೆಯಾಗಿ ಗುರುತಿಸಲ್ಪಡುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮತ್ತು ಯೋಜನೆ ರೂಪಿಸಲಾಗಿದ್ದು, ನಿಮ್ಮೆಲ್ಲರ ಸಹಕಾರ ಸಿಕ್ಕಿದರೆ ಶಾಲೆಯನ್ನು  ಅದ್ಬುತ ರೀತಿಯಲ್ಲಿ  ಮಾಡುವ ಭರವಸೆಯನ್ನು ಪ್ರಕಾಶ್ ಅಂಚನ್ ವ್ಯಕ್ತಪಡಿಸಿದ್ದಾರೆ.

 ಸಮಾಲೋಚನೆ ಸಭೆ: ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ “ಸರಕಾರಿ ಶಾಲೆ ಉಳಿಸಿ ಬೆಳೆಸಿ ” ಸಮಿತಿ ಇದರ ಅಧ್ಯಕ್ಷ ಜಯಂತ್ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ  ಶಾಲಾ ಶಿಕ್ಷಕರು ಮತ್ತು ಶಾಲಾಭಿವೃದ್ದಿ ಸಮಿತಿ ಪ್ರಮುಖರ ಜೊತೆಯಲ್ಲಿ ಸಮಾಲೋಚನೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಯಂತ್ ಕೋಟ್ಯಾನ್ ಅವರು ಶಾಸಕ ಹರೀಶ್ ಪೂಂಜ ಅವರ  ನೇತೃತ್ವದಲ್ಲಿ ಅಗಸ್ಟ್ ತಿಂಗಳಿನಲ್ಲಿ ನೂತನ ಕಟ್ಟಡವನ್ನು ಲೋಕಾರ್ಪಣೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.ಶಾಲೆಯ ಸಂಪೂರ್ಣ ಅಭಿವೃದ್ಧಿ ದೃಷ್ಟಿಯಿಂದ ಜೊತೆಯಾಗಿ ಕೆಲಸ ಮಾಡುವ  ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ  ಕಾರ್ಯದರ್ಶಿ ನಾರಾಯಣ ಪೂಜಾರಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಯಶೋಧರ ಬಂಗೇರ, ಉಪಾಧ್ಯಕ್ಷ ಯೋಗೇಂದ್ರ ಆಚಾರ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಗ್ರಾ.ಪಂ.ಸದಸ್ಯರಾದ ಅಶೋಕ್ ಪೂಜಾರಿ, ಸರಕಾರಿ ಶಾಲೆ ಉಳಿಸಿ ಬೆಳೆಸಿ  ರಾಜ್ಯ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಅಂಚನ್,ಸದಸ್ಯರಾದ ಮಹೇಶ್ ಕುಲಾಲ್ ಡೆಚ್ಚಾರು,ಅರುಣ್ ಗೌಡ, ರಾಮಚಂದ್ರ ಪೂಜಾರಿ, ಮುಖ್ಯೋಪಾಧ್ಯಾಯಿನಿ ಸುಪಲ  ಮತ್ತಿತರರು ಉಪಸ್ಥಿತರಿದ್ದರು.

Related posts

ಕಾರೊಂದು ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಡಿಕ್ಕಿ: ಯುವಕನನ್ನು ಬಂಧಿಸಿದ ಪೋಲಿಸರು

Suddi Udaya

ತಿರುವನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ

Suddi Udaya

ಕೊಕ್ಕಡ: ಕಾರು ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ಸವಾರರಿಗೆ ಗಾಯ

Suddi Udaya

ನಾವೂರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಗೋಳಿದಡಿ ಆಯ್ಕೆ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ಘಟಕ ವತಿಯಿಂದ ದಯಾ ಶಾಲೆಯ ವಿಶೇಷ ಚೇತನ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ

Suddi Udaya

ಇಲಂತಿಲ: ಮರದಿಂದ ಬಿದ್ದಿದ್ದ ನಾರಾಯಣ ಪೂಜಾರಿರವರು ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya
error: Content is protected !!