ವೇಣೂರು: ವೇಣೂರು ಲಯನ್ಸ್ ಕ್ಲಬ್‌ನ 2023-24ನೇ ಸಾಲಿನ ಅಧ್ಯಕ್ಷ ನಿರಂಜನ್ ಎಸ್. ಮತ್ತು ತಂಡದವರ ಪದಗ್ರಹಣ ಸಮಾರಂಭ ಹಾಗೂ ಸೇವಾ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ಜು.7ರಂದು ವೇಣೂರು ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು.
ಲಯನ್ಸ್ ದ್ವಿತೀಯ ರಾಜ್ಯಪಾಲರಾದ ಅರವಿಂದ ಶೆಣೈ ಕುಡುಪಿ ರವರು ಮಾತನಾಡಿ ನಮ್ಮ ಕಾರ್ಯದಲ್ಲಿ ಶ್ರದ್ಧೆ ಮತ್ತು ಸದಸ್ಯರ ನಡುವೆ ಪ್ರೀತಿ ವಿಶ್ವಾಸ ಮತ್ತು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡರೆ ಕ್ಲಬ್ ನ್ನು ಉನ್ನತ ಸ್ಥಾನಕ್ಕೆ ಏರಿಸಬಹುದು ಮತ್ತು ಪದಾಧಿಕಾರಿಗಳಿಗೆ ತಮ್ಮ ತಮ್ಮ ಜವಬ್ದಾರಿಯನ್ನು ತಿಳಿಸಿದರು. ನಿಕಟಪೂರ್ವಾಧ್ಯಕ್ಷ ಸೀತಾರಾಮ್ ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ 3 ಮಂದಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಸಂಪುಟ ಕಾರ್ಯದರ್ಶಿ ಓಸ್‌ವಾಲ್ಟ್, ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೊ, ಬೆಳ್ತಂಗಡಿ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಮೂಡಬಿದ್ರೆ ಕ್ಲಬ್ ಅಧ್ಯಕ್ಷ ಜೊಸ್ಸಿ ಮಿನೇಜಸ್, ಮುಚ್ಚೂರು ನೀರುಡೆ ಅಧ್ಯಕ್ಷ ರೋಶನ್ ಡಿಸೋಜ, ಅಲಂಗಾರ್ ಅಧ್ಯಕ್ಷ ಲಾಯ್ಟ್ ರೇಗೊ, ಗುರುಪುರ ಕೈಕಂಬ ಅಧ್ಯಕ್ಷ ಸುನೀಲ್ ಡಿಸೋಜ, ಸುಲ್ಕೇರಿ ಅಧ್ಯಕ್ಷ ರವಿ ಶೆಟ್ಟಿ ಬಪ್ಪನಾಡು, ಇನ್ಸ್‌ಪ್ಯಾರ್ ಅಧ್ಯಕ್ಷ ಎನ್. ಸುಧೀರ್ ಬಾಳಿಗ, ಪ್ರಾಂತ್ಯ 12 ವಲಯ ಅಧ್ಯಕ್ಷ ಪ್ರತಿಭಾ ಹೆಬ್ಬಾರ್, ವಲಯ 2ರ ಅಧ್ಯಕ್ಷ ಎಂ.ಕೆ. ದಿನೇಶ್, ಕೋಶಾಧಿಕಾರಿ ಲೂಕಾಶ್ ಕೋರಾಯ ಉಪಸ್ಥಿತರಿದ್ದರು.
ಸನ್ಮಾನ:
- ನೂತನವಾಗಿ ಆಯ್ಕೆಯಾದ ದ್ವಿತೀಯ ರಾಜ್ಯಪಾಲರಾದ ಅರವಿಂದ ಶೆಣೈ ಕುಡ್ಪಿ ರವರನ್ನು ಸನ್ಮಾನಿಸಿಲಾಯಿತು.
- ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಾಧಿಕ ಅಂಕ ಗಳಿಸಿದ ಸ್ಥಳೀಯ ಹೈಸ್ಕೂಲ್‌ಗಳ 5 ವಿದ್ಯಾರ್ಥಿಗಳಾದ ಸೋನಾಲ್ ರೇಗೋ, ರಿತಿಷಾ, ಶ್ರಾವ್ಯ, ಹರ್ಷಿತಾ, ಸಿಂಚನಾ ಭಟ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
- ವೇಣೂರು ನವಚೇತನ ವಿಶೇಷ ಮಕ್ಕಳಿಗೆ ಧನಸಹಾಯ ನೀಡಲಾಯಿತು.
ಲಯನ್ಸ್ ಜಗದೀಶ್ಚಂದ್ರ ಡಿ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಯಾನಂದ ಭಂಡಾರಿ ವಂದಿಸಿದರು.