24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವ- ಕಾರ್ಯಾಲಯ ಉದ್ಘಾಟನೆ, ವೆಬ್‌ಸೈಟ್ ಅನಾವರಣ

– ವೇಣೂರು : ಅಹಿಂಸೆ, ತ್ಯಾಗ, ಪ್ರಗತಿಯ ಧ್ಯೋತಕವಾಗಿ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಲಿದೆ. ಮಹಾಮಸ್ತಕಾಭಿಷೇಕದಿಂದ ಇಡೀ ಜಿಲ್ಲೆಗೆ ಮಜ್ಜನವಾಗಲಿದ್ದು, ಐಕ್ಯತೆ, ಒಗ್ಗಟ್ಟಿನಿಂದ ಮಹಾಮಸ್ತಕಾಭಿಷೇಕವನ್ನು ಅತ್ಯಂತ ಯಶಸ್ವಿಗೊಳಿಸೋಣ. ನಮ್ಮ ಐಕ್ಯತೆಯನ್ನು ಹೆಚ್ಚಿಸುವಲ್ಲಿ ಭಗವಂತನ ಶ್ರೀ ರಕ್ಷೆ ಇರಲಿ ಎಂದು ಮೂಡಬಿದಿರೆ ಜೈನಮಠದ ಡಾ| ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ನುಡಿದರು.

2024ರ ಫೆ. 22ರಿಂದ ಮಾ.1ರವರೆಗೆ ವೇಣೂರು ಶ್ರೀ ಬಾಹುಬಲಿ ಸ್ವಾಮಿಗೆ ಜರಗಲಿರುವ ಮಹಾಮಸ್ತಕಾಭಿಷೇಕದ ಪ್ರಯುಕ್ತ ರವಿವಾರ ಇಲ್ಲಿಯ ಯಾತ್ರಿ ನಿವಾಸದಲ್ಲಿ ಜರಗಿದ ಮಹಾಮಸ್ತಕಾಭಿಷೇಕದ ಕಾರ್ಯಾಲಯ ಉದ್ಘಾಟನೆ ಹಾಗೂ ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಕಾರ್ಯಾಲಯ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸಾಯಂಕಾಲ ಮಹಾಮಸ್ತಕಾಭಿಷೇಕ : ಮಹಾಮಸ್ತಕಾಭಿಷೇಕದ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ದೀಪ ಪ್ರಜ್ವಲಿಸಿ ಮಾತನಾಡಿ, ಮೂಡಬಿದಿರೆ ಭಟ್ಟಾರಕ ಶ್ರೀಗಳ ಮಾರ್ಗದರ್ಶನದಲ್ಲಿ, ಧರ್ಮಸ್ಥಳದ ಡಾ| ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಮಸ್ತ ಜೈನ ಬಾಂಧವರ ಸಹಕಾರದಿಂದ ಈ ಸಲದ ಮಸ್ತಕಾಭಿಷೇಕವೂ ಯಶಸ್ವಿಯಾಗಿ ನೆರವೇರಲಿದೆ. ಹಂತಹಂತವಾಗಿ ಮಸ್ತಕಾಭಿಷೇಕದ ವಿಚಾರದಲ್ಲಿ ಮುಂದುವರಿಯುತ್ತೇವೆ. ಪೂರ್ವಜನರ ಸಂಪ್ರದಾಯದಂತೆ ಈ ಸಲವೂ ಸಾಯಂಕಾಲವೇ ಮಹಾಮಸ್ತಕಾಭಿಷೇಕಗಳು ನೆರವೇರಲಿದೆ ಎಂದರು.ಮಸ್ತಕಾಭಿಷೇಕದ ಕೊಂಡಿಯಾಗಿ ಸರಕಾರದಿಂದ ಸಹಕಾರ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ವೈಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿ, ವೇಣೂರು ಮಹಾಮಸ್ತಕಾಭಿಷೇಕದಲ್ಲಿ ರಾಜ್ಯ ಸರಕಾರ ಕೊಂಡಿಯಾಗಿ ಸಹಕಾರ ನೀಡಬೇಕೆಂದು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದ್ದೇನೆ. ಜೈನಪರಂಪರೆಯನ್ನು ಇಡೀ ನಾಡಿಗೆ ತಿಳಿಸುವ ಕಾರ್ಯ ಮಹಾಮಸ್ತಕಾಭಿಷೇಕದಿಂದ ಆಗಲಿ ಎಂದರು. ಮಹಾಮಸ್ತಕಾಭಿಷೇಕ ಸಮಿತಿಯ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ ಉಪಸ್ಥಿತರಿದ್ದರು.

ಸ್ಟಿಕ್ಕರ್ ಬಿಡುಗಡೆ: ಮಹಾಮಸ್ತಕಾಭಿಷೇಕ ಮಹೋತ್ಸವದ ವಾಹನ ಸ್ಟಿಕ್ಕರನ್ನು ಬಿಡುಗಡೆಗೊಳಿಸಲಾಯಿತು. ಮಹಾಮಸ್ತಕಾಭಿಷೇಕದ ಮೊದಲ ದೇಣಿಗೆಯಾಗಿ ನೀಡಿದ ಪ್ರಸನ್ನಾ ಆರ್. ಅವರಿಗೆ ರಶೀದಿ ಹಸ್ತಾಂತರಿಸಲಾಯಿತು. ಬೆಳಗಾವಿ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರ ನಿಧನಕ್ಕೆ ಮೌನಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಾ| ಸರ್ವಾರ್ಥ್ ಜೈನ್ ಪ್ರಾರ್ಥಿಸಿ, ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ ಸ್ವಾಗತಿಸಿ, ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿ ಜತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ವಂದಿಸಿದರು.

ಜಿಲ್ಲೆಯಲ್ಲೇ ಬಾಹುಬಲಿ ಮೂರ್ತಿ ಇಡೀ ಜಗತ್ತಿಗೆ ಸಂದೇಶ ಸಾರಿದ ಮಹಾನ್ ಸಂತ. ಬಾಹುಬಲಿಯ ಎತ್ತರದ ಮೂರ್ತಿಯನ್ನು ಇಡೀ ಭಾರತದಲ್ಲಿ ನೀಡಿರುವ ಖ್ಯಾತಿ ಕರ್ನಾಟಕ ರಾಜ್ಯದ್ದು. ರಾಜ್ಯದಲ್ಲೇ ದ.ಕ. ಜಿಲ್ಲೆ ಅತೀ ಹೆಚ್ಚು ಬಾಹುಬಲಿ ಮೂರ್ತಿಗಳನ್ನು ಹೊಂದಿರುವ ಹೆಗ್ಗಳಿಕೆ ಇದೆ. ವೇಣೂರು ಮೂರ್ತಿಯನ್ನು ೧೬೦೪ರಲ್ಲಿ ಅಜಿಲ ಅರಸರು ಮತ್ತು ಬೈರವ ಅರಸರ ಸಮ್ಮುಖದಲ್ಲಿ ಸ್ಥಾಪಿಸಿಸಲಾಗಿದೆ. ಅವರ ಆದರ್ಶಗಳಿಂದ ಇಂದೂ ಸಮಾಜದಲ್ಲಿ ಸರ್ವಧರ್ಮ ಸಮನ್ವಯತೆ ಕಾಯ್ದುಕೊಂಡು ಬಂದಿದೆ.- ಮೂಡಬಿದಿರೆ ಶ್ರೀ

Related posts

ಲಾಯಿಲ ಬಿಜೆಪಿ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಬೆಳ್ತಂಗಡಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ವಿವಿಧ ವಿಭಾಗಗಳ ಪರಿಶೀಲನೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕನ್ಯಾಡಿ ಗ್ರಾಮ ಸಮಿತಿ ಹಾಗೂ ಯುವ ವೇದಿಕೆ ಸಮಿತಿ ರಚನೆ

Suddi Udaya

ಧರ್ಮಸ್ಥಳ :ನಡುಗುಡ್ಡೆ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪ್ರಯುಕ್ತ 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಕೊಕ್ಕಡ ಸ. ಪ್ರೌಢಶಾಲೆಯಲ್ಲಿ ಅ.3 ರಿಂದ ಅ.9 ರವರೆಗೆ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ

Suddi Udaya

ಮಚ್ಚಿನ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya
error: Content is protected !!