April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿ: ಶ್ರೀ ನೇಮಿನಾಥ ಸ್ವಾಮಿ ಬಸದಿಯ ನೂತನ ಗೋಪುರದ ಶಿಲಾನ್ಯಾಸ

ಸುಲ್ಕೇರಿ : ಶ್ರೀ ನೇಮಿನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಬಸದಿಯ ನೂತನ ಗೋಪುರದ ಶಿಲಾನ್ಯಾಸ ಸಮಾರಂಭ ಜು. 9 ರಂದು ಸುಲ್ಕೇರಿ ಬಸದಿಯಲ್ಲಿ ನಡೆಯಿತು.


ಪುರೋಹಿತರ ಧಾರ್ಮಿಕ ಪೂಜೆಗಳೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಮೂಡಬಿದ್ರೆ ಎಕ್ಸ್ ಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ ಜೈನ್, ನೂರಾಳ್ ಬೆಟ್ಟು ಜಯಧವಳದ ವಿಜಯ ಕುಮಾರ್ ಜೈನ್, ಮನ್ಮಥ ಕುಮಾರ್ ನೆಲ್ಲಿಕಾರು, ಸತೀಶ್ ಪಡಿವಾಳ್ ಪುತ್ತೂರು ಭಾಗವಹಿಸಿ ಬಸದಿಯ ಕೆಲಸ ಕಾರ್ಯಗಳಿಗೆ ಸಹಾಯ ಮಾಡುವುದರೊಂದಿಗೆ ಶುಭ ಕೋರಿದರು.


ಈ ಸಂದರ್ಭದಲ್ಲಿ ಗಣ್ಯರನ್ನು ಬಸದಿಯ ವತಿಯಿಂದ ಗೌರವಿಸಲಾಯಿತು.
ಆಡಳಿತ ಸಮಿತಿಯ‌ ಮೊಕ್ತೇಸರರಾದ ಎನ್.ರವಿರಾಜ ಹೆಗ್ಡೆ ನಾವರ ಗುತ್ತು ಮತ್ತು ಸಮಸ್ತ ಜೈನ ಭಾಂಧವರು ಭಾಗವಹಿಸಿದ್ದರು.

Related posts

ರಾಜಕಾರಣದ ಗಂಡೆದೆಯ ನಾಯಕ ಮಾಜಿ‌ ಶಾಸಕ ಕೆ.ವಸಂತ ಬಂಗೇರರ ನಿಧನಕ್ಕೆ ಭಾರತೀಯ ಮಜ್ದೂರು ಸಂಘ ಜಿಲ್ಲಾಧ್ಯಕ್ಷ,ನ್ಯಾಯವಾದಿ ಅನಿಲ್ ಕುಮಾರ್ ರವರಿಂದ ಸಂತಾಪ

Suddi Udaya

ಬೆಳ್ತಂಗಡಿ ತಾಲೂಕಿನ ಕೆಲವೆಡೆ ಉತ್ತಮ ಮಳೆ

Suddi Udaya

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವ

Suddi Udaya

ವಾಣಿ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಅಲ್ಯುಮಿನಿಯಂ ದೋಂಟಿಗೆ ವಿದ್ಯುತ್ ಸ್ಪರ್ಷ: ಸಿಹಿಯಾಳ ತೆಗೆಯುತ್ತಿದ್ದ ಕೃಷಿಕ ಸಾವು

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಮಂಗಲ ಕಾರ್ಯಕ್ರಮ: ರಾಜ್ಯದ 6374 ವಿಶೇಷ ಚೇತನರಿಗೆ ಉಚಿತ ಸಲಕರಣೆ ವಿತರಣೆ

Suddi Udaya
error: Content is protected !!