April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಪೆರ್ಮುಡ: ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಬರವಣಿಗೆ ಪುಸ್ತಕ ವಿತರಣೆ

ಪೆರ್ಮುಡ: ಸ.ಹಿ.ಪ್ರಾ.ಶಾಲೆ ಪೆರ್ಮುಡಲ್ಲಿ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಜರಗಿತು. ಕುಕ್ಕೇಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಶೋಕ್ ಪಾಣೂರುರವರ ವತಿಯಿಂದ ನಡೆದ 11ನೇ ವರ್ಷದ ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಹಳೇ ವಿದ್ಯಾರ್ಥಿ ಸಂದೀಪ್ ಮೆಂಡೋನ್ಸ ಮೈಕ್ ಹಾಗೂ ಸೌಂಡ್‌ ಸಿಸ್ಟಮ್ ಕೊಡುಗೆಯಾಗಿ ನೀಡಿದರು.

ವೇದಿಕೆಯಲ್ಲಿ ಎಸ್. ಡಿ.ಎಂ.ಸಿ.ಯ ಅಧ್ಯಕ್ಷರಾದ ಪ್ರಭಾಕರ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀತಾ, ನವೋದಯ ಬ್ಯಾಂಕ್‌ನ ವ್ಯವಸ್ಥಾಪಕರಾದ ನಿತೇಶ್, ಊರಿನ ಪ್ರಗತಿಪರ ಕೃಷಿಕರಾದ ಸ್ಟೀವನ್, ಶಾಲಾ ಮುಖ್ಯಶಿಕ್ಷಕಿ ಸವಿತಾರವರು ಉಪಸ್ಥಿತರಿದ್ದರು.

ಗೌರವ ಶಿಕ್ಷಕಿ ಸುಜಾತಾ ಸ್ವಾಗತಿಸಿ, ಅತಿಥಿ ಶಿಕ್ಷಕಿ ಮೋಹಿನಿ ವಂದಿಸಿದರು. ಸಹಶಿಕ್ಷಕರಾದ ಬಿ. ಟಿ. ಧನಂಜಯ ಕಾರ್ಯಕ್ರಮ ನಿರೂಪಿಸಿದರು.

Related posts

ಬಂದಾರು ಬಿಜೆಪಿ ಶಕ್ತಿಕೇಂದ್ರ ಮೈರೋಳ್ತಡ್ಕದಲ್ಲಿ ಮಹಾಸಂಪರ್ಕ ಅಭಿಯಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಿರಿಯ ನಟಿ ಶೃತಿ ಹಾಗೂ ನಿರ್ದೆಶಕ ತರುಣ್ ಸುಧೀರ್ ದಂಪತಿ ಭೇಟಿ

Suddi Udaya

ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ರೇಷ್ಮಾ ಕೆ.ಎಸ್ ರವರಿಗೆ ‘ರಾಜ್ಯ ಮಟ್ಟದ ವಿದ್ಯಾರತ್ನ ಪ್ರಶಸ್ತಿ’ ಪ್ರದಾನ

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ಸಾಂಪ್ರದಾಯಿಕ ದಿನಾಚರಣೆ

Suddi Udaya

ಬೆಳ್ತಂಗಡಿ ತಾ| ಕಚೇರಿಯ ನಿವೃತ್ತ ಉಪತಹಶೀಲ್ದಾರ್ ನಿಡ್ಲೆ ಚೆನ್ನಪ್ಪ ಗೌಡ ನಿಧನ

Suddi Udaya

ಇಂದಬೆಟ್ಟು: ಸಿಡಿಲು ಬಡಿದು ಮಹಿಳೆ ಅಸ್ವಸ್ಥ

Suddi Udaya
error: Content is protected !!