ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಬೆಳ್ತಂಗಡಿ ಜೈನ ಸಮಾಜದ ಸಂಘಟನೆಗಳಿಂದ ಖಂಡನೆ: ಸಮಗ್ರ ತನಿಖೆಗೆ ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ

Suddi Udaya

ಬೆಳ್ತಂಗಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಜೈನ ಕ್ಷೇತ್ರದ ಜೈನ ಮುನಿ ಆಚಾರ್ಯ 108 ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆಯನ್ನು ಖಂಡಿಸಿ ಸಮಗ್ರ ತನಿಖೆಗಾಗಿ ಆಗ್ರಹ ಮತ್ತು ಸಮಾಜದ ಉಳಿದ ಮುನಿಗಳ,ತ್ಯಾಗಿಗಳ ಸೂಕ್ತ ರಕ್ಷಣೆಗಾಗಿ ಬೆಳ್ತಂಗಡಿ ಜೈನ ಸಮಾಜದ ಸಂಘಟನೆಗಳಿಂದ ಬೆಳ್ತಂಗಡಿ ತಹಶಿಲ್ದಾರ ಸುರೇಶ್ ಕುಮಾರ್ ಮುಖಾಂತರ ಮುಖ್ಯಮಂತ್ರಿಗೆ ಜು.10 ರಂದು ಮನವಿ ಸಲ್ಲಿಸಿದರು.

ಬಸದಿ ಸ್ವಚ್ಚತಾ ತಂಡ, ಜೈನ್ ಮಿಲನ್ ಬೆಳ್ತಂಗಡಿ, ವೇಣೂರು, ದೀಮತಿ ಜೈನ ಮಹಿಳಾ ಸಮಾಜ ಉಜಿರೆ, ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ವೇಣೂರು ಹಾಗೂ ಸಮಸ್ತ ಜೈನ ಬಾಂಧವರ ಪರವಾಗಿ ಮನವಿ‌ ಸಲ್ಲಿಸಿ ಸೂಕ್ತ ತನಿಖಾಧಿಕಾರಿಯನ್ನು ನೇಮಿಸಿ ಎಲ್ಲಾ ಆಯಾಮಗಳಲ್ಲಿ ಸಮಗ್ರ ತನಿಖೆ ನಡೆಸಿ ಲೋಪ ದೋಗಳು ಉಳಿಯದಂತೆ ದೋಷಾರೋಪಣ ಪಟ್ಟಿ ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಆದೇಶಿಸುವಂತೆ ಮನವಿಯಲ್ಲಿ ತಿಳಿಸಿದ್ದರು.

ಈ ಸಂದರ್ಭದಲ್ಲಿ ಬಿ.ಸೋಮಶೇಖರ ಶೆಟ್ಟಿ ಉಜಿರೆ, ಜೈನ್ ಮಿಲನ್ ಬೆಳ್ತಂಗಡಿ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ್, ದಿಗಂಬರ ಜೈನ್ ತೀರ್ಥ ಕ್ಷೇತ್ರ ಸಮಿತಿ ವೇಣೂರು ಇದರ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ,
ನ್ಯಾಯವಾದಿ ಶಶಿಕಿರಣ್ ಜೈನ್ ಬೆಳ್ತಂಗಡಿ, ನವೀನ್ ಚಂದ್ರ ಬಳ್ಳಾಲ್ ವೇಣೂರು,ಪ್ರಶಾಂತ್ ಜೈನ್ ಉಜಿರೆ, ಸಂಪತ್ ಕುಮಾರ್ ಜೈನ್, ಅಶೋಕ್ ಜೈನ್,ಪಣಿರಾಜ್ ಜೈನ್, ವಿತೇಶ್ ಜೈನ್ ಪಡಂಗಡಿ, ನಿತೇಶ್ ಜೈನ್ ಪುತ್ತಿಲ, ಸಂತೋಷ್ ಕುಮಾರ್ ಜೈನ್ ಪಡಂಗಡಿ, ಪ್ರಮೋದ್ ಕುಮಾರ್ ಜೈನ್ ವೇಣೂರು, ಸುಕೇಶ್ ಕಡಂಬು, ಶೀತಲ್ ಜೈನ್ ಶಿರ್ಲಾಲು, ಅರಿಹಂತ್ ಜೈನ್ ಅಳದಂಗಡಿ, ನವೀನ್ ಜೈನ್ ಅಳದಂಗಡಿ, ಪ್ರವೀಣ್ ಜೈನ್ ಅಳದಂಗಡಿ,ಉದಯ ಕುಮಾರ್ ಕಂಬಳಿ, ವೃಷಭ ರಾಜ ಆರಿಗ, ಸುಮಂತ್ ಕುಮಾರ್ ಜೈನ್, ಉದಯ ವರ್ಮಾ, ವಿನಯ ಪ್ರಸಾದ್, ಲಾಲಾ ಚಂದ್ರ,ನಮನ್ ರಾಜ್, ಜೀವಂಧರ್ ಜೈನ್,ಪದ್ಮಶ್ರೀ ರಕ್ಷಿತ್ ಜೈನ್, ದಿವ್ಯಾ ಪ್ರಧಾನ್ ಜೈನ್, ಅಭಿನಂದನ್, ಅಜಯ್ ಕುಮಾರ್ ಜೈನ್, ಗುಣಪಾಲ್ ಶೆಟ್ಟಿ ಬಿ, ಬಿ. ನಿರ್ಮಲ್ ಕುಮಾರ್ ವೇಣೂರು, ಮಾಣಿಕ್ಯ ರಾಜ್, ಪ್ರವೀಣ್ ಪಡಿವಾಲ್, ವಿನಯಚಂದ್ರ ರಾಜ್ , ಉದಯ್ ಕುಮಾರ್, ಸುಧೀರ್ ಜೈನ್, ಪಾಶ್ವನಾಥ್ ಜೈನ್ ಬೆಳ್ತಂಗಡಿ, ಮುನಿರಾಜ್ ಅಜ್ರಿ, ಎನ್ ಶಾಂತಿರಾಜ್ ಜೈನ್ ಪಡಂಗಡಿ, ಜಗದೀಶ್ ಅಜ್ರಿ, ಅಶೋಕ್ ಜೈನ್ ಭಂಡಾಜೆ, ದೀಪಕ್ ಜೈನ್, ನಿಶಿತ್ ಜೈನ್, ಪವಿತ್ರಾ ಜೈನ್, ಪ್ರಧಾನ್ ಜೈನ್, ತೃಪ್ತಾ ಜೈನ್, ಹಾಗೂ ಸಮಸ್ತ ಜೈನ ಬಾಂಧವರು ಉಪಸ್ಥಿತರಿದ್ದರು.

Leave a Comment

error: Content is protected !!