ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

ನಾರಾವಿ: “ಮಾದಕ ದ್ರವ್ಯಕ್ಕೆ ದಾಸರಾದವರು ಅವರಿಂದ ಹೊರಬರಲು ಕಷ್ಟಪಡಬೇಕಾಗುತ್ತದೆ.ಮಾದಕ ದ್ರವ್ಯ ಮನುಷ್ಯನಲ್ಲಿ ತಪ್ಪುಗಳನ್ನು ಮಾಡಿಸುತ್ತದೆ.ಮಾದಕ ವಸ್ತುಗಳ ಸೇವನೆಯ ಚಟವನ್ನು ಬಿಟ್ಟು ಮತ್ತೆ ಒಳ್ಳೆಯ ಬದುಕು ಕಟ್ಟಲು ಸಾದ್ಯವಿದೆ” ಎಂದು ಸಮಾಜಸೇವಕರಾದ ಶ್ರೀ ಮಾರ್ಕ್ ಡಿ ಸೋಜ ಮಂಗಳೂರು ಇವರು ಹೇಳಿದರು.


ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಸ್.ಸಿ.ಎಸ್ ಆಸ್ಪತ್ರೆ ಮಂಗಳೂರು ಇಲ್ಲಿನ ವೈದ್ಯರಾದ ಡಾ| ಅನಿರುದ್ಧ್ ಇವರು ಮಾದಕ ದ್ರವ್ಯ ಸೇವನೆಯು ಮನುಷ್ಯನ ಮೆದುಳನ್ನು ಯಾವ ರೀತಿಯಾಗಿ ಘಾಸಿಗೊಳಿಸುತ್ತದೆ ಎಂಬುದನ್ನು ತಿಳಿಸಿದರು.ಮದ್ಯದ ವ್ಯಸನಕ್ಕೆ ಬಲಿಯಾಗಿ ಮತ್ತೆ ಅದರಿಂದ ಹೊರಬಂದು ನೆಮ್ಮದಿಯ ಜೀವನ ಸಾಗಿಸುತ್ತಿರುವ ಹಾಗೂ ಸಮಾಜಸೇವಕರಾದ ಎಲಿಯಾಸ್ ಮೊಂತೆರೊ ತಾಕೊಡೆ ಇವರು ತಮ್ಮ ಜೀವನದ ಬಗ್ಗೆ ವಿವರಿಸಿ ಮದ್ಯವ್ಯಸನದಿಂದಾಗುವ ದುಷ್ಪರಿಣಾಮವನ್ನು ಸವಿಸ್ತಾರವಾಗಿ ತಿಳಿಸಿದರು.ಕಾಲೇಜಿನ ಪ್ರಾಚಾರ್ಯರಾದ ವಂ.ಡಾ. ಆಲ್ವಿನ್ ಸೆರಾವೊ ಎಲ್ಲರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಎನ್. ಎಸ್.ಎಸ್. ಯೋಜನಾಧಿಕಾರಿಗಳಾದ ದಿನೇಶ್ ಬಿ.ಕೆ. ,ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕರಾದ ರಿಚರ್ಡ್ ಮೋರಸ್ ಕಾರ್ಯಕ್ರಮ ನಿರೂಪಿಸಿದರು.

Related posts

ಪಡುಬಿದ್ರೆಯಲ್ಲಿ ಭೀಕರ ರಸ್ತೆ ಅಪಘಾತ: ಅರಸಿನಮಕ್ಕಿ ಪುರುಷೋತ್ತಮ್ ಅಭ್ಯಂಕರ್ ರವರ ಪತ್ನಿ ಶ್ರೀಮತಿ ಸುಮಂಗಳ ಮೃತ್ಯು

Suddi Udaya

ಪಟ್ರಮೆ: ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ರಸ್ತೆ ಸಂಚಾರ ವ್ಯತ್ಯಯ

Suddi Udaya

ನಾವೂರು ಸರಕಾರಿ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜರಿಗೆ ಸ್ವಾಮೀಜಿಯವರಿಂದ ಆಶೀರ್ವಾದ:

Suddi Udaya

ಗುರುವಾಯನಕೆರೆ ಸ.ಪ್ರೌ. ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ ವಿಟ್ಲ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಹುಣ್ಸೆಕಟ್ಟೆ ಪಲ್ಕೆ ನಿವಾಸಿ ನಾರಾಯಣ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!