25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ: ಉಜಿರೆ ದೊಂಪದ ಪಲ್ಕೆ ಕೋಟಪ್ಪ ಪೂಜಾರಿಯವರಿಗೆ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಸಹಾಯ ಹಸ್ತ

ಬೆಳ್ತಂಗಡಿ: ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ ಪ್ರಯುಕ್ತ ಉಜಿರೆ ಗ್ರಾಮದ ದೊಂಪದ ಪಲ್ಕೆ ನಿವಾಸಿ ಕೋಟಪ್ಪ ಪೂಜಾರಿ ಇವರಿಗೆ ಪಕ್ಷಪಾತದಿಂದ ಬಳಲುತ್ತಿದ್ದು ಇವರಿಗೆ ಯುಡಿಐಡಿ ಕಾರ್ಡ್ ಮಾಡುವ ಮುಂಚಿತವಾಗಿ ಇವರ ಹಳೆಯ ವಿಕಲಚೇತನ ಗುರುತಿನ ಚೀಟಿಯು ನವೀಕರಣ ಮಾಡುವ ಸಲುವಾಗಿ ಇವರಿಗೆ ವೈದ್ಯರು ಸಿಟಿ ಸ್ಕ್ಯಾನಿಂಗ್ ಮಾಡಲು ಹೇಳಿರುತ್ತಾರೆ ಇವರಿಗೆ ಆರ್ಥಿಕ ಸ್ಥಿತಿ ಕಷ್ಟಕರವಾದುದರಿಂದ ಸಿಟಿ ಸ್ಕ್ಯಾನಿಂಗ್ ಮಾಡಿಸಲು ರಾಜ ಕೇಸರಿ ಸಂಘಟನೆ ಸಹಾಯ ಹಸ್ತ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ರಾಜ ಕೇಸರಿ ಬೆಳ್ತಂಗಡಿ ತಾಲೂಕ ಅಧ್ಯಕ್ಷರಾದ ಸಂದೀಪ್, ರಾಜ ಕೇಸರಿ ಸಂಘಟನೆಯ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಶನ್ ಸಿಕ್ಕೇರಾ, ಸಂಘಟನೆ ಸದಸ್ಯರಾದ ಶಶಿಕಾಂತ್ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ ಉಪಸ್ಥಿತರಿದ್ದರು.

Related posts

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya

ಸಾವ್ಯ: ನೂಜಿಲೋಡಿಯಲ್ಲಿ ಮನೆಗೆ ನುಗ್ಗಿದ್ದ ಕಳ್ಳರು: ರೂ.2.15ಲಕ್ಷ ಮೌಲ್ಯದ ಸೊತ್ತುಗಳ ಕಳವು

Suddi Udaya

ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಓಡಿಲ್ನಾಳ ಉ.ಹಿ.ಪ್ರಾ. ಶಾಲೆಗೆ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ಅಕ್ಷತಾ ಯಶೋಧರ ಶೆಟ್ಟಿ ಆಯ್ಕೆ

Suddi Udaya

ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಅಂಡಿಂಜೆ : ಪರಮೇಶ್ವರ ಕೆ. ನಿಧನ

Suddi Udaya
error: Content is protected !!