ತೆಂಕಾಕಾರಂದೂರು: ಹತ್ತೂರಿನ ಪ್ರೀತಿಗಿಂತ ವಾಸವಿರುವ ಊರಿನ ಪ್ರೀತಿಗೆ ಬೆಲೆ ಕಟ್ಟಲಾಗದು: ಪ.ರಾ.ಶಾಸ್ತ್ರಿ

Suddi Udaya

ತೆಂಕಕಾರಂದೂರು: ಸಾಹಿತ್ಯದ ಬದುಕಿನಲ್ಲಿ ತೆಂಕಕಾರಂದೂರು ಗ್ರಾಮದ ಮಿತ್ರರು ತೋರಿದ ಪ್ರೀತಿ ಅಪಾರ. ಬೇರೆ ಊರಿನಿಂದ ಬಂದು ಇಲ್ಲಿ ನೆಲೆನಿಂತರೂ ಜೀವನ ಪಯಣದ 70ನೇ ಸಂವತ್ಸರಕ್ಕೆ ಕಾಲಿಟ್ಟ ಈ ಸುಸಂದರ್ಭದಲ್ಲಿ ನನ್ನೊಂದಿಗೆ ಸಂಭ್ರಮಿಸಿ, ನನ್ನ ಸಾಹಿತ್ಯದ ಮೇಲೆ ಅಪಾರವಾದ ಪ್ರೀತಿಯನ್ನು ತೋರಿಸಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃಷಿಗಾಗಿ ಮಾಡಿದ ಅಭಿನಂದನೆ-ಗೌರವಾರ್ಪಣೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಜೀವನಪರ್ಯಂತ ಈ ಪ್ರೀತಿಗೆ ತೆಂಕಕಾರಂದೂರು ಜನತೆಗೆ ಋಣಿಯಾಗಿರುತ್ತೇನೆ ಎಂದು ಪ.ರಾಮಕೃಷ್ಣ ಶಾಸ್ತ್ರಿ ನುಡಿದರು.

ಅವರು ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಖಂಡಿಗದಲ್ಲಿ ಜುಲೈ 9 ರಂದು ನಡೆದ ಎಪ್ಪತ್ತನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಂಕಕಾರರಂದೂರು ಮತ್ತು ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಖಂಡಿಗ ಇಲ್ಲಿಯ ಭಕ್ತವೃಂದ ಆಯೋಜಿಸಿದ ಅಭಿನಂದನೆ-ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು.

ಅಂಡಿಂಜೆ ಶಾಲಾ ಶಿಕ್ಷಕ ಶಿವಶಂಕರ್ ಭಟ್ ಶುಭಾಶಂಸನೆ ಗೈದರು.

ಸಂತಾನ ಗೋಪಾಲಕೃಷ್ಣ ದೇವಸ್ಥಾನ ಖಂಡಿಗ ತೆಂಕಕಾರಂದೂರು ಇಲ್ಲಿಯ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ನೂರಿತ್ತಾತಾಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ಜಯಶಂಕರಶರ್ಮ, ಊರಿನ ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಸಾಲಿಯನ್ ಕಾಪಿನಡ್ಕ, ನಿವೃತ್ತ ಯೋಧ ರಮಾನಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎರಡು ದೇವಸ್ಥಾನಗಳ ಭಕ್ತವೃಂದದ ಪರವಾಗಿ ಪ.ರಾಮಕೃಷ್ಣ ಶಾಸ್ತ್ರಿ- ಶ್ರೀಮತಿ ಶಾರದಾ ದಂಪತಿಯನ್ನು ಅಭಿನಂದಿಸಿ ಗೌರವಿಸಲಾಯಿತು.

ಕುಮಾರಿ ಸಾನ್ವಿ ಪ್ರಾರ್ಥಿಸಿ, ಪದ್ಮ ನಾಯ್ಕ ಸ್ವಾಗತಿಸಿ ಶ್ರೀಮತಿ ಸುಧಾಮಣಿ ವಂದಿಸಿದರು. ಸಂತೋಷ್ ಹೆಗ್ಡೆ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕ ದೇವುದಾಸ್ ನಾಯಕ್ ನಿರೂಪಿಸಿದರು.

Leave a Comment

error: Content is protected !!