ತೆಂಕಕಾರಂದೂರು:ನಿರಂತರ ನೆಟ್‌ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ತೆಂಕಕಾರಂದೂರು ಗ್ರಾಮಸ್ಥರು ಏರ್‌ಟೆಲ್ ಸಂಸ್ಥೆ ವಿರುಧ್ದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಏರ್‌ಟೆಲ್ ನೆಟ್‌ವರ್ಕ್ ವಿರುಧ್ದ ಘೋಷಣೆಯನ್ನು ಕೂಗಲಾಯಿತು ಮತ್ತು ನೆಟ್‌ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಗಡುವು ನೀಡಲಾಯಿತು ಮತ್ತು ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಬಳಂಜ ಗ್ರಾಮ ಪಂಚಾಯತ್ ಸದಸ್ಯರಾದ ನಿಝಾಮ್ ಕಟ್ಟೆ, ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಅಧ್ಯಕ್ಷರಾದ ನವಾಝ್ ಶರೀಫ್ ಕಟ್ಟೆ, ಹಳೆ ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಮೋದರ ( ಮುನ್ನ) ಕಟ್ಟೆ, ಪವನ್ ಕಟ್ಟೆ, ಅಶ್ರಫ್ ಗುಂಡೇರಿ, ಮುಸ್ತಫ ಮಂಜೋಟ್ಟಿ, ಅಶ್ರಫ್ ಕಟ್ಟೆ, ನಾರಯಣ ಗಿಂಡಾಡಿ, ಹಮೀದ್ ಕಟ್ಟೆ, ಅಶ್ರಫ್ ಮಂಜೋಟ್ಟಿ, ಸುದರ್ಶನ್ ಗಿಂಡಾಡಿ, ಪುತ್ತು ಕಟ್ಟೆ, ದಯಾನಂದ ಗಿಂಡಾಡಿ , ರಿಕ್ಷಾ ಚಾಲಕರು ಮತ್ತು ಮಾಲಕರು ಊರಿನ ನಾಗರಿಕರು ಭಾಗವಹಿಸಿದರು.