23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ನಿಡ್ಲೆ ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಹಾಗೂ ಹಣ್ಣು ಹಂಪಲು ಸಸಿಗಳ ವಿತರಣೆ

ನಿಡ್ಲೆ: ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದ ವತಿಯಿಂದ ಸರಕಾರಿ ಪ್ರೌಢ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ ಹಾಗೂ ಅಂಗನವಾಡಿ ಕೇಂದ್ರ ನಿಡ್ಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಹಾಗೂ ಇಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪಠ್ಯಕ್ಕೆ ಉಪಯೋಗವಾಗುವಂತಹ ಪುಸ್ತಕ, ಪೆನ್, ಪೆನ್ಸಿಲ್, ಕೊಡೆ ಹಾಗೂ ಹಣ್ಣು ಹಂಪಲು ಇನ್ನಿತರ ವಸ್ತುಗಳನ್ನು ಉಚಿತವಾಗಿ ಜು.10 ರಂದು ವಿತರಿಸಲಾಯಿತು.

ಇವರು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ತಾಲೂಕಿನ ಗಮನ ಸೆಳೆಯುತ್ತಿರುವ ನಿಡ್ಲೆ ಗ್ರಾಮದ ಯುವ ಉದ್ಯಮಿ ಕೆ.ಎಂ ನಾಗೇಶ್ ಕುಮಾರ್ ಇವರು ಶೈಕ್ಷಣಿಕ ಸಾಮಾಜಿಕ ಕಾರ್ಯಗಳ ಮುಖೇನ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಇವರು ಸ್ವಾಮೀಪ್ರಸಾದ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಹಲವಾರು ಜನರಿಗೆ ಉದ್ಯೋಗ ನೀಡಿ, ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.


ಈ ಸಂದರ್ಭದಲ್ಲಿ ಆಯೋಜಕರಾದ ನಾಗೇಶ್ ಕುಮಾರ್, ಬೆಸ್ಟ್ ಪೌಂಡೇಶನ್ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ, ಸುಧಾ ನಾಗೇಶ್ ಕುಮಾರ್ ಹಾಗೂ ನಾಗೇಶ್ ಕುಮಾರ್ ಅಭಿಮಾನಿ ಬಳಗದ ಉಸ್ತುವಾರಿಗಳಾದ ಉಮೇಶ್ ಬಂಗೇರ ಕಾಪಿನಡ್ಕ, ಅಶಿಪ್ ಐಡಿಯಲ್, ಧನುಷ್ ನಿಡ್ಲೆ ,ಅಶ್ವಿನ್ ಕಿರಣ್ ,ಹರಿಶ್ಚಂದ್ರ, ಗಣೇಶ್ ಪಿಜಿನಡ್ಕ, ಅಚ್ಯುತ್ ನಾಯ್ಕ, ಉಸ್ಮಾನ್ ಲಿಯೋ ಮೊಂತೆರೋ, ಆರಿಫ್ ಶಪ್ವಾನ್ ಹಾಗೂ ಕಲಂದರ್ ಎಂ ಎಚ್ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಪೆನ್ಸಿಲ್ವೇನಿಯ ಯುನಿರ್ವಸಿಟಿಯ ವಿದ್ಯಾರ್ಥಿಗಳ ತಂಡ ಭೇಟಿ

Suddi Udaya

ತೋಟತ್ತಾಡಿ: ಮರದಿಂದ ಬಿದ್ದು ವ್ಯಕ್ತಿ ಸಾವು

Suddi Udaya

ಉಜಿರೆ: ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

Suddi Udaya

ಜೋಡುಸ್ಥಾನ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯುಗಂಧರ್, ಕಾರ್ಯದರ್ಶಿ ಚೇತನ್

Suddi Udaya

ಮುಗೇರಡ್ಕ: ಸ್ಪಂದನ ಚಾರಿಟೇಬಲ್ ಟ್ರಸ್ಟ್ , ಬೆಂಗಳೂರು ಮತ್ತು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಇದರ ಆಶ್ರಯದಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ

Suddi Udaya

ಕುವೆಟ್ಟು ಗ್ರಾ.ಪಂ. ವತಿಯಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya
error: Content is protected !!