September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಇಂದಬೆಟ್ಟು : ಮಾತೃಶ್ರೀ ಮುಗೇರ ಸೇವಾ ಸಂಘದಿಂದ ಪುಸ್ತಕ ವಿತರಣೆ

ಇಂದಬೆಟ್ಟು : ಮಾತೃಶ್ರೀ ಮುಗೇರ ಸೇವಾ ಸಂಘ ಇಂದಬೆಟ್ಟು ಇದರ ವತಿಯಿಂದ 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ನಡ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು ಗ್ರಾಮದ ಮುಗೇರ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭವು ಜು. 9 ರಂದು ಸ.ಹಿ.ಪ್ರಾ.ಶಾಲೆ ದೇವನಾರಿ ಇಂದಬೆಟ್ಟುವಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೇಶವ ಬೈರೊಟ್ಟು ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಇಂದಬೆಟ್ಟು ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಆಶಾಲತಾ, ಮಾಜಿ ಜಿ.ಪಂ ಸದಸ್ಯೆ ಶ್ರೀಮತಿ ಸಿ.ಕೆ ಚಂದ್ರಕಲಾ, ಸಮುದಾಯದ ಮುಖಂಡರಾದ ವಿಜಯ ವಿಕ್ರಮ್ ರಾಮಕುಂಜ, ಕೊರಗಪ್ಪ ಅಳದಂಗಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಉಪನ್ಯಾಸಕರಾದ ಡಾ. ಕುಶಾಲಪ್ಪ ಕೊಯ್ಯೂರು, ಬಂಗಾಡಿ ಸಿ.ಎ ಬ್ಯಾಂಕ್ ನಿರ್ದೇಶಕರಾದ ರಘುನಾಥ್ ಕೊಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 50 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಸುಂದರ.ಎ ಇಂದಬೆಟ್ಟು ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನುಸ್ವಾಗತಿಸಿದರು. ಹರಿಣಾಕ್ಷಿ ಧನ್ಯವಾದವಿತ್ತರು. ಜಗದೀಶ್ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಕನ್ಯಾಡಿ: ಪ್ರಗತಿಪರ ಕೃಷಿಕ ಬೊಲ್ಲೊಟ್ಟು ಬಾಬು ಶೆಟ್ಟಿ ನಿಧನ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಅರಸಿನಮಕ್ಕಿ ಸ. ಪ್ರೌ. ಶಾಲೆಯಲ್ಲಿ ಸ್ವಾತಂತ್ಯೋತ್ಸವ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ

Suddi Udaya

ಜ. 25: ಅರಸಿನಮಕ್ಕಿಯಲ್ಲಿ ಹಿಂದೂ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಟ್ರಮೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya

ಅಕ್ರಮ ಮರಳುಗಾರಿಕೆ: ಸರಕಾರಿ ಜಾಗದಲ್ಲಿ ದಾಸ್ತಾನು ಇರಿಸಿದ ಮರಳನ್ನು ವಶಪಡಿಸಿಕೊಂಡ ಪೊಲೀಸರು

Suddi Udaya
error: Content is protected !!