ಮಧ್ವ ಯಕ್ಷಕೂಟ ಮಡಂತ್ಯಾರು ವಲಯ ಸಮಿತಿ ಉದ್ಘಾಟನೆ: ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ

Suddi Udaya

ಮಡಂತ್ಯಾರು : ಬಂಟ್ವಾಳ ತಾಲೂಕಿನ ಮಧ್ವ ಯಕ್ಷಕೂಟದ ಮಡಂತ್ಯಾರು ವಲಯ ಸಮಿತಿಯ ಉದ್ಘಾಟನೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜು.9 ರಂದು ಮಾಲಾಡಿ ಗ್ರಾಮದ ಕೊಲ್ಪೆದಬೈಲ್ ಎಸ್‌ಕೆಎಸ್ ಸಭಾಂಗಣದಲ್ಲಿ ನಡೆಯಿತು.
ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಪ್ರ.ಅರ್ಚಕ ಟಿ.ವಿ.ಶ್ರೀಧರ ಭಟ್ ಅವರು ನೂತನ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿ, ಪುರಾಣ ಜ್ಞಾನ ತಿಳಿಯುತ್ತದೆ. ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಜಗತ್ತಿನೆಲ್ಲೆಡೆ ಪಸರಿಸಿದ್ದು, ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.
ನಡುಬೊಟ್ಟು ಶ್ರೀ ಉದ್ಭವರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ರವಿ.ಎನ್ ಮುಖ್ಯ ಅತಿಥಿಯಾಗಿ ಮಾತನಾಡಿ, ತಾಳವೆಂದರೆ ತಾಳ್ಮೆ, ಮದ್ದಳೆ ಎಂದರೆ ಮೌನ. ಮನೆಯಲ್ಲಿ ಪತಿ,ಪತ್ನಿ ಹೊಂದಾಣಿಕೆಯಲ್ಲಿದ್ದಾಗ ಮಕ್ಕಳಿಗೆ ಉತ್ತಮ ಸಂಸ್ಕಾರ ಬರುತ್ತದೆ. ಹಿರಿಯರಿಗೆ ಗೌರವ,ದೈವ,ದೇವರಲ್ಲಿ ಭಕ್ತಿ ಇಂತಹ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ನೀಡುವ ಯಕ್ಷಗಾನವನ್ನು ಬೆಳೆಸಬೇಕು. ನಿರಂತರ ತಾಳಮದ್ದಳೆ ನಡೆಸುವ ಯಕ್ಷಕೂಟದ ಭಾಸ್ಕರ ಶೆಟ್ಟಿ ಅವರ ಶ್ರಮ ಅಭಿನಂದಾರ್ಹ ಎಂದರು.


ಪ್ರಗತಿಪರ ಕೃಷಿಕ ಮೂಡಾಯೂರು ಸಂಜೀವ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಲಾಡಿ ಗ್ರಾ.ಪಂ.ಉಪಾಧ್ಯಕ್ಷ ದಿನೇಶ್ ಕರ್ಕೇರ, ಉದ್ಯಮಿ ಜಯಪ್ರಕಾಶ ಸಂಪಿಗೆತ್ತಾಯ ಬಳ್ಳಮಂಜ, ಮಾಲಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಯಕ್ಷಮಿತ್ರರು ಮಾಲಾಡಿ ಇದರ ಅಧ್ಯಕ್ಷ ಶಿವಪ್ಪ ಗೌಡ, ಪಾರೆಂಕಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಟ್ಠಲ ಶೆಟ್ಟಿ, ಮಡಂತ್ಯಾರು ವಲಯ ಸಮಿತಿ ಅಧ್ಯಕ್ಷ ರವಿಶಂಕರ್ ಶೆಟ್ಟಿ, ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ, ಯಶೋಧರ ಟೈಲರ್, ಪದಾಧಿಕಾರಿಗಳಾದ ರತ್ನಾಕರ ಶೆಟ್ಟಿ, ಸಂಜೀವ ಶೆಟ್ಟಿ ಉರೆಸಾಗು, ಹಿರಿಯ ಅರ್ಥಧಾರಿ ತಿಮ್ಮಪ್ಪ ಶೆಟ್ಟಿ ಪಾತಿಲ,ಸುಜಾತಾ ಶೆಟ್ಟಿ, ಯಕ್ಷ ಕೂಟ ಸಮಿತಿ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ಜನಾರ್ದನ ಶೆಟ್ಟಿ ವಂದಿಸಿದರು. ಬಳಿಕ ಶ್ರೀಕಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು.

Leave a Comment

error: Content is protected !!