26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹತೆಗೊಳಿಸಿರುವುದಕ್ಕೆ ಖಂಡನೆ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರತಿಭಟನೆ

ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ( ನಗರ ಮತ್ತು ಗ್ರಾಮೀಣ) ವತಿಯಿಂದ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಖಂಡಿಸಿ , ಬೆಳ್ತಂಗಡಿ ಮೂರು ಮಾರ್ಗದ ಬಳಿ ಮೌನ ಪ್ರತಿಭಟನೆಯು ಜು.12ರಂದು ನಡೆಯಿತು.

ಮಾಜಿ ಸಚಿವ ಕೆ ಗಂಗಾಧರ ಗೌಡ ಮಾತನಾಡಿ “ಭಾರತವನ್ನು ಒಗ್ಗೂಡಿಸುವ ಉದ್ದೇಶಕ್ಕಾಗಿ ರಾಹುಲ್ ಗಾಂಧಿಯವರು ದೇಶದ ಉದ್ದಗಲಕ್ಕೂ ನಡೆಸಿದ ಪಾದಯಾತ್ರೆಯ ಯಶಸ್ಸನ್ನು ಸಹಿಸದ ಕೇಂದ್ರ ಸರಕಾರ,ಹಳೆ ಪ್ರಕರಣವನ್ನು ಎತ್ತಿಕೊಂಡು ಕೇಸು ದಾಖಲಿಸಿ ಇಡೀ ವ್ಯವಸ್ಥೆಗಳನ್ನೇ ಕೈಗೊಂಬೆಯಾಗಿಸಿ ಅವರ ಸದಸ್ಯತ್ವ ರದ್ದು ಪಡಿಸಿದೆ.ಕೀಳು ರಾಜಕೀಯದ ಮೂಲಕ ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿ ಕುಟುಂಬವನ್ನು ನಾಶ ಮಾಡುವ ಬಿಜೆಪಿಯವರ ಯಾವುದೇ ಪ್ರಯತ್ನಗಳು ಸಫಲವಾಗದಾಗ ಇಂತಹ ದುಷ್ಟ ಯೋಚನೆಗಳನ್ನು ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದರು.


ಮಾಜಿ ಶಾಸಕ ಕೆ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕು‌ಮಾರ್, ರಂಜನ್ ಜಿ.ಗೌಡ, ಕೆ.ಪಿ‌.ಸಿ.ಸಿ ಸದಸ್ಯರುಗಳಾದ ಮೋಹನ ಶೆಟ್ಟಿಗಾರ್, ಕೇಶವ ಗೌಡ, ಪಕ್ಷದ ಮುಖಂಡರುಗಳಾದ ಲೋಕೇಶ್ವರಿ ವಿನಯ ಚಂದ್ರ, ಇ.ಸುಂದರ ಗೌಡ,ಅಭಿನಂದನ್ ಹರೀಶ್,ಉಷಾ ಶರತ್,ಎ.ಸಿ. ಮ್ಯಾಥ್ಯೂ,ಅಶ್ರಫ್ ನೆರಿಯ,ಸಲೀಂ ಗುರುವಾಯನಕೆರೆ, ಮೆಹಬೂಬ್,ಬಿ.ಕೆ. ವಸಂತ್,ಜಗದೀಶ್ ಡಿ., ಹಾಗೂ ಇತರರು ಉಪಸ್ಥಿತರಿದ್ದರು.
ಒಂದು ಗಂಟೆ ಕಾಲ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.

Related posts

ನಾಲ್ಕೂರು: ತೋಟದಪಲ್ಕೆ ನಿವಾಸಿ ಭಾನುಮತಿ ನಿಧನ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಅಂಗಣೋತ್ಸವ , ದೇವರ ದರ್ಶನ ಬಲಿ

Suddi Udaya

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ: ಬಿಜೆಪಿ ಶಾಸಕರುಗಳಿಂದ ವಿಧಾನ ಸೌಧದ ಎದುರು ಭಿತ್ತಿಪತ್ರ ಪ್ರದರ್ಶನ: “ದಕ್ಷಿಣ ಕನ್ನಡ ತೆರಿಗೆ ಮುಸ್ಲಿಮರ ಮನೆಗೆ” ಗಮನ ಸೆಳೆದ ಶಾಸಕ ಹರೀಶ್ ಪೂಂಜ ಪ್ರದರ್ಶಿಸಿದ ಬಿತ್ತಿಪತ್ರ

Suddi Udaya

ನಾವರ ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಯೋಜನೆಯ ಕಚೇರಿ ಸಹಾಯಕರ ಮೂರು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

Suddi Udaya
error: Content is protected !!