ಧರ್ಮಸ್ಥಳ: ಧರ್ಮಸ್ಥಳದಲ್ಲಿ ಐವತ್ತೆರಡನೇ ವರ್ಷದ ಪುರಾಣ ಕಾವ್ಯವಾಚನ – ಪ್ರವಚನದ ಅಂಗವಾಗಿ ಜು.17 ಸೋಮವಾರದಿಂದ ಎರಡು ತಿಂಗಳ ಕಾಲ ಕುಮಾರ ವಾಲ್ಮೀಕಿ ವಿರಚಿತ “ತೊರವೆ ರಾಮಾಯಣ”ದ ಬಗ್ಗೆ ವಾಚನ-ಪ್ರವಚನ ನಡೆಯಲಿದೆ.
ದೇವಸ್ಥಾನದ ಎದುರು ಇರುವ ಪ್ರಚನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದ ಪೆರುವಡಿ ನಾರಾಯಣ ಭಟ್ ಜು. 17 ರಂದು ಸೋಮವಾರ ಸಂಜೆ ಗಂಟೆ 5.30ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಖ್ಯಾತ ಸಾಹಿತಿ ಬಿ.ಎಲ್. ನಾಗರಾಜು ಬರೆದ “ಶ್ರೀಮದಾದಿತ್ಯ ದರ್ಶನಂ” ಕೃತಿಯನ್ನು ಇದೇ ಸಂದರ್ಭ ಲೋಕಾರ್ಪಣೆ ಮಾಡಲಾಗುವುದು.
ಬಿಲ್.ಎಲ್. ನಾಗರಾಜು, ಹರಿಕೃಷ್ಣ ಪುನರೂರು ಮತ್ತು ಪಾದೆಕಲ್ಲು ವಿಷ್ಣುಭಟ್ ಶುಭಾಶಂಸನೆ ಮಾಡುವರು.