September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ ಗ್ರಾ.ಪಂ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಹೊಸಂಗಡಿ: ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಜನಪ್ರಿಯ ಯೋಜನೆಗಳು ಕಟ್ಟಕಡೆಯ ಫಲಾನುಭವಿಗಳಿಗೂ ದೊರಕುವಂತಾಗಲಿ ಎನ್ನುವ ನಿಟ್ಟಿನಲ್ಲಿ ಮತ್ತು ಇದರ ಮಾಹಿತಿ ಎಲ್ಲರಿಗೂ ತಿಳಿದು ಪ್ರಯೋಜನ ಪಡೆಯುವಂತಾಗಲಿ ಎಂಬ ದ್ಯೇಯ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಡಿ. 11 ರಂದು ಹೊಸಂಗಡಿ ಗ್ರಾಮ ಪಂಚಾಯತ್ ಗೆ ಆಗಮಿಸಿದ್ದು ಸಂಭ್ರಮದಿಂದ ಬರಮಾಡಿಕೊಂಡರು.

ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಉದ್ಘಾಟಿಸಿದರು.

ವೇದಿಕೆಯಲ್ಲಿ ಕೆನರಾ ಬ್ಯಾಂಕಿನ ವೇಣೂರು ಬ್ರಾಂಚ್ ಮೆನೆಜರ್ ಅಲೋಕ್, ನಿಕಟಪೂರ್ವ ಅಧ್ಯಕ್ಷ ಕರುಣಾಕರ ಬಡಕೋಡಿ, ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ನೀಡುವ ಉಷಾ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಪಂಚಾಯತ್ ಪ್ರಬಾರಿ ದಿನಕರ ಕುಲಾಲ್ ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಗೋಪಾಲಕೃಷ್ಣ ಭಟ್, ಸಂಜೀವಿನಿ ಸಂಘದ ಸದಸ್ಯೆ ಎಲ್ಲಾ ಬಗೆಯ ಕೃಷಿ ಹೈನುಗಾರಿಕೆ ತೊಡಗಿಸಿಕೊಂಡ ಸುಧಾ ಗಂಗಾಧರ್, ಜೇನು ಕೃಷಿ ಮಾಡುತ್ತಿರುವ ಶ್ರೀಧರ ಮಲೆಕುಡಿಯ, ಪೋಷಣ್ ಯೋಜನೆ ಅಡಿಯಲ್ಲಿ ಕು.ಲಿಪಿ, ಕು.ಪೂಜಿತಾ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಉಜಿರೆ: ಎಸ್.ಡಿ.ಎಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ “ಸ್ಫೂರ್ತಿದಾಯಕ ವ್ಯಕ್ತಿತ್ವ” ಕಾರ್ಯಕ್ರಮ

Suddi Udaya

ಧರ್ಮಸ್ಥಳ: ನದಿಯ ತೀರದಲ್ಲಿ ಅಪರಿಚಿತ ಶವ ಪತ್ತೆ

Suddi Udaya

ಭುಜಬಲಿ ಧರ್ಮಸ್ಥಳ ರವರಿಗೆ “ಶ್ರೀ ಯಕ್ಷಾಂಜನೆಯ ಪ್ರಶಸ್ತಿ” ಪ್ರದಾನ

Suddi Udaya

ಕೊಕ್ಕಡ: ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಶಬರಾಯ ನಿಧನ

Suddi Udaya

ವೇಣೂರು: ನವೋದಯ ಚೈತನ್ಯ ವಿಮಾ ಮೊತ್ತದ ಚೆಕ್ ವಿತರಣೆ

Suddi Udaya

ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ NET-2024 ಮರು ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿಯಿಂದ ಕ್ರ್ಯಾಶ್ ಕೋರ್ಸ್: ಜು.10 ರಿಂದ ಆನ್ಲೈನ್ ತರಗತಿಗಳು ಪ್ರಾರಂಭ

Suddi Udaya
error: Content is protected !!