ಶ್ರೀ ಅಯ್ಯಪ್ಪ ಎಜುಕೇಷನ್ ಸೆಂಟರ್ ಸಿಬಿಎಸ್ ಇ ಸ್ಕೂಲ್ ಬೆಂಗಳೂರು ಹತ್ತು ಹನ್ನೊಂದು ಮತ್ತು ಹನ್ನೆರಡನೇ ತರಗತಿಯ ಮಕ್ಕಳಿಗಾಗಿ ಆಯೋಜಿಸಿದ್ದ. ಮಕ್ಕಳಿಗೆ ಓದುವುದು ಎಷ್ಟು ಮಹತ್ವ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದ ಪದ್ಮಲತಾ ಮೋಹನ್ ನಿಡ್ಲೆ ಸಾಹಿತಿ ಉಪನ್ಯಾಸಕಿ ಇವರು ವಿದ್ಯಾರ್ಥಿಗಳಿಗೆ ಪುಸ್ತಕ ಓದುವುದರ ಮಹತ್ವ ಹಾಗು ಓದುವುದರ ಅಭ್ಯಾಸ ವನ್ನು ಹೇಗೆ ಬೆಳೆಸಬಹುದೆಂದು ವಿವರವಾಗಿ ತಿಳಿಸುತ್ತಾ, ಮಕ್ಕಳಿಗೆ ಅಂಕಗಳ ಜೊತೆ ತಿಳುವಳಿಕೆ ಕೂಡ ಮುಖ್ಯ ಅದಕ್ಕಾಗಿ ವಿವಿಧ ರೀತಿಯ ಪುಸ್ತಕಗಳನ್ನು ಓದಬೇಕು ಎಂಬ ಕಿವಿ ಮಾತು ಹೇಳಿದರು.
ಓದುವ ಹವ್ಯಾಸವನ್ನು ಬೆಳೆಸುವಲ್ಲಿ ಪೋಷಕರ ಮತ್ತು ಹೆತ್ತವರ ಪಾತ್ರವನ್ನು ಒತ್ತಿ ಹೇಳಿದ ಇವರು ಶಾಲೆಗಳಲ್ಲಿ ಓದುವುದನ್ನು ಪ್ರೋತ್ಸಾಹಿಸಲು ಅನುಕೂಲವಾಗುವಂತಹ ಚಟುವಟಿಕೆಯನ್ನು ಮಾಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಸ್ಕೂಲ್ ಪ್ರಾಂಶುಪಾಲರಾದ ಶ್ರೀಮತಿ ಕಮಲಾ ಸೆಲ್ವರಾಜನ್ , ಮುಖ್ಯಶಿಕ್ಷಕಿ ಶ್ರೀಮತಿ ಅಮಿತಾ ಡಿ ರಾವ್ ಉದಯೋನ್ಮುಖ ಬರಹಗಾರ್ತಿ ಕುಮಾರಿ ಶ್ರೇಯಾ ಮತ್ತು ಉಳಿದ ಶಿಕ್ಷಕರು ಉಪಸ್ಥಿತರಿದ್ದರು.