March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ದಿ ಹೇರ್‌ಲೇರ್ ಮೆನ್ಸ್ ಸೆಲೂನ್ ಉದ್ಘಾಟನೆ: ನೂತನ ಸೆಲೂನನ್ನು ಉದ್ಘಾಟಿಸಿ ಶುಭ ಹಾರೈಸಿದ ಖ್ಯಾತ ವೈದ್ಯ ಡಾ| ಶಾಂತಿಪ್ರಸಾದ್

ವೇಣೂರು: ಇಲ್ಲಿಯ ನೂತನ ಬಸ್ ತಂಗುದಾಣದ ನೆಲಮಹಡಿಯಲ್ಲಿ ನೂತನವಾಗಿ ಅರಂಭಗೊಂಡ ದಿ ಹೇರ್‌ಲೇರ್ ಮೆನ್ಸ್ ಸೆಲೂನ್‌ನ ಉದ್ಘಾಟನೆಯು ಇತ್ತೀಚೆಗೆ ಜರಗಿತು.


ವೇಣೂರಿನ ಪ್ರಖ್ಯಾತ ವೈದ್ಯರಾದ ಡಾ| ಶಾಂತಿಪ್ರಸಾದ್ ಅವರು ನೂತನ ಸೆಲೂನನ್ನು ಉದ್ಘಾಟಿಸಿ, ಶುಭ ಹಾರೈಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್, ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ವೆಂಕಟೇಶ್ ಭಂಡಾರಿ ಚಿಕ್ಕಮಗಳೂರು, ದಿವಾಕರ ಭಂಡಾರಿ ನಾರಾವಿ, ಪೂವಪ್ಪ ಭಂಡಾರಿ ಬೆಳ್ತಂಗಡಿ, ಉಮೇಶ್ ಭಂಡಾರಿ ಪಡ್ಡಂದಡ್ಕ, ಅಣ್ಣಿ ಭಂಡಾರಿ ಬೆಳ್ತಂಗಡಿ, ಗುಂಡ್ಯಲ್ಕೆ ಅಶೋಕ್ ಭಂಡಾರಿ, ಗಣೇಶ್ ನರ್ಮದಾ ಸ್ಟುಡಿಯೋ, ನಾಗಪ್ಪ, ಲಿಂಗಪ್ಪ ಮೂಲ್ಯ, ರವೀಂದ್ರ ಭಂಡಾರಿ ಮಂಗಳೂರು ವೇಣೂರಿನ ಉದ್ಯಮಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಸಂಸ್ಥೆಯ ಮಾಲಕರಲ್ಲಿ ಓರ್ವರಾದ ಪ್ರಜ್ವಲ್ ಭಂಡಾರಿ ಮಾತನಾಡಿ, ಮಂಗಳೂರಿನ ಮುಡಿಪು ಮತ್ತು ಕಾಯರ್‌ಗೋಳಿಯಲ್ಲಿ ನಮ್ಮ ಸಂಸ್ಥೆ ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿದೆ. ವೇಣೂರಿನ ನೂತನ ಸೆಲೂನಲ್ಲೂ ಗ್ರಾಹಕರಿಗೆ ಆಶಾದಾಯಕ ಸೇವೆ ನೀಡಲು ಸನ್ನದ್ಧರಾಗಿದ್ದು, ತ್ವರಿತ ಸೇವೆಗಾಗಿ ಮೂವರು ಸಿಬ್ಬಂದಿ ಕಾರ್ಯಾಚರಿಸುತ್ತಿದ್ದಾರೆ ಎಂದರು. ಸಂಸ್ಥೆಯ ಸಹವರ್ತಿಗಳಾದ ವೇಣೂರು ಮೋಹನ್ ಭಂಡಾರಿ, ಪ್ರಮೋದ್ ಭಂಡಾರಿ ಅತಿಥಿಗಳನ್ನ ಸತ್ಕರಿಸಿದರು.

Related posts

ಧರ್ಮಸ್ಥಳ “ರಂಗಶಿವ”ಬಳಗದಿಂದ ಮಕ್ಕಳ ರಂಗ ಶಿಬಿರ “ನಲಿಯೋಣ ಬಾ- 2023”

Suddi Udaya

ತುಂಬೆದಲೆಕ್ಕಿ ಶಿಲಾಮಯ ಭಜನ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

Suddi Udaya

ಸಾವ್ಯ: ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರನ್ನು ಭೇಟಿ ಮಾಡಿದ ಬೆಳ್ತಂಗಡಿ ವಕೀಲರ ಸಂಘ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya
error: Content is protected !!